ಮೈಸೂರು: ಮುಖ್ಯಮಂತ್ರಿಯಾಗಿ ಇನ್ನೂ ಎರಡೂವರೆ ವರ್ಷ ನಾನೇ ಇರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂದಿನ ವರ್ಷವೂ ದಸರಾ ಜಂಬೂಸವಾರಿಯಲ್ಲಿ ನಾನೇ ಏಕೆ ಪುಷ್ಪಾರ್ಚನೆ ಮಾಡಬಾರದು?
ಇಷ್ಟು ವರ್ಷ ಮಾಡಿಕೊಂಡು ಬಂದಿದ್ದೇನೆ. ಮುಂದೆಯೂ ನಿರ್ವಹಿಸುವ ಭರವಸೆ ಇದೆ ಎಂದರು.
ಬಿಜೆಪಿಯವರು ನಾನು
ಎರಡನೇ ಬಾರಿ ಸಿಎಂ ಆಗಲ್ಲ ಅಂದಿದ್ದರು. ಬಜೆಟ್ ಮಂಡಿಸಲ್ಲ ಅಂದಿದ್ದರು. ಆದರೆ ಆಗಿದ್ದೇನೆ. ಕಾರ್ ಮೇಲೆ ಕಾಗೆ ಬಂದು ಕುಳಿತಿದ್ದಕ್ಕೆ ಅಧಿಕಾರ ಕಳೆದುಕೊಳ್ತಾರೆ ಅಂದಿದ್ದರು. ಆದರೆ ಅದ್ಯಾವುದೂ ಆಗಲಿಲ್ಲ. ನವೆಂಬರ್ ಕ್ರಾಂತಿ ಆಗುತ್ತದೆ, ಸಿಎಂ ಬದಲಾವಣೆ ಆಗುತ್ತದೆ ಎಂದೆಲ್ಲಾ ಬಹಳ ಜನ ಬಹಳಷ್ಟು ಹೇಳುತ್ತಾರೆ, ಹೇಳಲಿ. ನವೆಂಬರ್‌ನಲ್ಲಿ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುವ ಕಾರಣದಿಂದ ಆ ರೀತಿ ಮಾತನಾಡುತ್ತಾರೆ. ನಾನೇನು ಹೇಳಿದ್ದೇನೆ ಎಂದರೆ,
ಹೈ ಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ಹೈ ಕಮಾಂಡ್ ಹೇಳಿದಂತೆ ಕೇಳಬೇಕು. ಅವರ ತೀರ್ಮಾನದಂತೆ ಎಲ್ಲರೂ ನಡೆದುಕೊಳ್ಳಬೇಕಲ್ಲವೇ?' ಎಂದರು.
'ಬಿಜೆಪಿಯವರಿಗೆ ವಸ್ತುಸ್ಥಿತಿ ಗೊತ್ತಿಲ್ಲ. ಆದ್ದರಿಂದ ಅವರು ಹೇಳಿದಂತೆ ಏನೂ ನಡೆಯುವುದಿಲ್ಲ. ಅವರ ಭವಿಷ್ಯ ನಿಜವಾಗುವುದಿಲ್ಲ. ಏಕೆಂದರೆ ಅವರು
ಭವಿಷ್ಯಕಾರರಲ್ಲ. ಅವರು ಹೇಳಿದ್ದೆಲ್ಲಾ ಸುಳ್ಳಾಗಿದೆ' ಎಂದರು.
ಸಚಿವರಾದ ಕೆ.ವೆಂಕಟೇಶ್, ಡಾ.ಎಚ್.ಸಿ. ಮಹದೇವಪ್ಪ, ವಿಧಾನಪರಿಷತ್ ಡಾ.ಡಿ. ತಿಮ್ಮಯ್ಯ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.