ADVERTISEMENT

ಸಿದ್ದರಾಮಯ್ಯ ನನಗೆ ತಂದೆ ಸಮಾನ,ಅವರು ಹೊಡೆದ್ರು ಅಂತ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 12:58 IST
Last Updated 4 ಸೆಪ್ಟೆಂಬರ್ 2019, 12:58 IST
   

ಮೈಸೂರು:ಮೈಸೂರು ವಿಮಾನ ನಿಲ್ದಾಣದ ಹೊರಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವ್ಯಕ್ತಿಯೊಬ್ಬರ ಕೆನ್ನೆಗೆ ಹೊಡೆದಿದ್ದರು. ಮಾಧ್ಯಮಗಳ ಮುಂದೆಯೇ ಸಿದ್ದರಾಮಯ್ಯ ಈ ರೀತಿ ವರ್ತಿಸಿರುವುದರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದಿವೆ.

ಏತನ್ಮಧ್ಯೆ, ಸಿದ್ದರಾಮಯ್ಯ ನನಗೆ ಹೊಡೆದಿಲ್ಲ ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಡಿ ಎಂದು ಸಿದ್ದರಾಮಯ್ಯ ಅವರ ಅಭಿಮಾನಿ ಸ್ಪಷ್ಟನೆ ನೀಡಿದ್ದಾರೆ.

‘ಮೈಸೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಮುಖಂಡ ಮರಿಗೌಡ ಕಾಲ್ ಮಾಡಿ ಲೈನ್‌ನಲ್ಲಿ ಇದ್ದರು. ಸಾಹೇಬರಿಗೆ (ಸಿದ್ದರಾಮಯ್ಯ) ಫೋನ್ ಕೊಡಲು ಮುಂದಾದೆ.ಏ ನಾನು ಸುಬ್ಬಯ್ಯ ಕಾರ್ಯಕ್ರಮಕ್ಕೆ ಹೋಗ್ತಿದ್ದಿನಿ ಅಂತಾ ಪ್ರೀತಿಯಿಂದಹೊಡೆದರು ಅಷ್ಟೇ.

ಸಿದ್ದರಾಮಯ್ಯ ಅವರು ನನಗೆ ತಂದೆ ಸಮಾನ. ನನ್ನ ಗುರುಗಳು, ಹಿರಿಯರು. ಅವರ ಮಾರ್ಗದರ್ಶನದಿಂದ ನಾನು ಚೆನ್ನಾಗಿ ಬದುಕಿದ್ದೀನಿ. ಅವರ ಆಶೀರ್ವಾದ ಇದೆ. ಅವರು ಹೊಡೆದ್ರೂ ಏನೂ ಬೇಜಾರಿಲ್ಲ. ಬೇರೆ ರೀತಿ ಯಲ್ಲಿ ಅರ್ಥ ಮಾಡಿಕೊಳ್ಬೇಡಿ. ಸಿದ್ದರಾಮಯ್ಯ ಜತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ಸಾಕಿದ ಮಗನಾಗಿದ್ದೇನೆ ಹೊರತು ಇನ್ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.