ADVERTISEMENT

ರಂಗಭೂಮಿ–ಬದುಕು ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 14:45 IST
Last Updated 1 ಡಿಸೆಂಬರ್ 2022, 14:45 IST
ಸಂತ ಫಿಲೋಮಿನಾ ಕಾಲೇಜಿನ ಅಮೃತ ಮಹೋತ್ಸವ ಅಂಗವಾಗಿ ಕನ್ನಡ ವಿಭಾಗದ ಆಯೋಜಿಸಿದ್ದ ವಿಶೇಷ ಉಪನ್ಯಾಸ ನೀಡಿದ ರಂಗಕರ್ಮಿ ಪ್ರೊ.ಸಿ.ವಿ.ಶ್ರೀಧರಮೂರ್ತಿ ಅವರನ್ನು ಸನ್ಮಾನಿಸಲಾಯಿತು
ಸಂತ ಫಿಲೋಮಿನಾ ಕಾಲೇಜಿನ ಅಮೃತ ಮಹೋತ್ಸವ ಅಂಗವಾಗಿ ಕನ್ನಡ ವಿಭಾಗದ ಆಯೋಜಿಸಿದ್ದ ವಿಶೇಷ ಉಪನ್ಯಾಸ ನೀಡಿದ ರಂಗಕರ್ಮಿ ಪ್ರೊ.ಸಿ.ವಿ.ಶ್ರೀಧರಮೂರ್ತಿ ಅವರನ್ನು ಸನ್ಮಾನಿಸಲಾಯಿತು   

ಮೈಸೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ ಅಮೃತ ಮಹೋತ್ಸವ ಅಂಗವಾಗಿ ಕನ್ನಡ ವಿಭಾಗದ ವತಿಯಿಂದ ವಿಶೇಷ ಉಪನ್ಯಾಸ ಮಾಲೆಯಲ್ಲಿ ‘ರಂಗಭೂಮಿ ಮತ್ತು ಬದುಕು’ ವಿಷಯ ಕುರಿತು ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.

ರಂಗಕರ್ಮಿ ಪ್ರೊ.ಸಿ.ವಿ.ಶ್ರೀಧರಮೂರ್ತಿ ಉಪನ್ಯಾಸ ನೀಡಿದರು. ನಾಟಕ ಕಲೆ ಬೆಳೆದು ಬಂದ ಬಗೆ, ಹಿಂದಿನ ತಲೆಮಾರುಗಳ ರಂಗದ ಬದುಕು ಮತ್ತು ಬವಣೆಗಳ ಕುರಿತು ತಿಳಿಸಿದರು. ಪೌರಾಣಿಕ ನಾಟಕಗಳ ಸಂಭಾಷಣೆಗಳನ್ನು ಹೇಳಿ, ಅಭಿನಯಿಸಿ ನೆರೆದಿದ್ದವರನ್ನು ರಂಜಿಸಿದರು.

ರೆಕ್ಟರ್‌ ಡಾ.ಬರ್ನಾರ್ಡ್‌ ಪ್ರಕಾಶ್ ಬಾರ್ನಿಸ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಸದೆಬೋಸ್ ಎ.ಟಿ., ಪ್ರಾಂಶುಪಾಲ ಡಾ.ರವಿ ಜೆ.ಡಿ. ಸನ್ಡಾನ್ಹಾ, ಕಾಲೇಜಿನ ಆವರಣ ಆಡಳಿತಾಧಿಕಾರಿ ಫಾ.ಪ್ರವೀಣ್ ಕುಮಾರ್, ಕನ್ನಡ ವಿಭಾಗದ ಮೇರಿ ನಿವೇದಿತಾ, ಡಾ.ಎಸ್.ಶಿವರಾಜು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.