ADVERTISEMENT

ನಂದೀಶ್ ಹಂಚೆ ವಿರುದ್ಧ ಕ್ರಮಕ್ಕೆ ಒತ್ತಾಯ

ಮುಡಾ ನಿವೇಶನದ ಅಕ್ರಮ ವರ್ಗಾವಣೆ, ತನಿಖೆಗೆ ಶಿವರಾಮು ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 19:56 IST
Last Updated 28 ನವೆಂಬರ್ 2020, 19:56 IST
ಡಾ.ನಂದೀಶ್ ಹಂಚೆ
ಡಾ.ನಂದೀಶ್ ಹಂಚೆ   

ಮೈಸೂರು: ‘ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್ ಹಂಚೆ ವಾಮಮಾರ್ಗ ದಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಖರೀದಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು’ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಒತ್ತಾಯಿಸಿದರು.

‘ವಿಜಯನಗರ ನಾಲ್ಕನೇ ಹಂತದ ಲ್ಲಿರುವ ನಿವೇಶನ ಸಂಖ್ಯೆ 3,165ರ ಸಂಬಂಧ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸಬೇಕು. ಈ ಅಕ್ರಮ ದಲ್ಲಿ ಭಾಗಿಯಾಗಿರುವ ಮುಡಾ ಆಯುಕ್ತ ಡಿ.ಬಿ.ನಟೇಶ್‌,ಇತರ ಅಧಿಕಾರಿಗಳನ್ನು ಕೂಡಲೇಅಮಾನತು ಗೊಳಿಸಬೇಕು’ ಎಂದು ಶನಿವಾರಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಸುಮಾರು ₹4 ಕೋಟಿ ಬೆಲೆ ಬಾಳುವ (50x80 ಅಡಿ) ನಿವೇಶನ ವನ್ನು ನಂದೀಶ್‌ ಅವರು ಪತ್ನಿ ದೀಪಾ ಹಂಚ್ಯ ಅವರ ಹೆಸರಿಗೆ ಒಂದೇ ದಿನದಲ್ಲಿ ವರ್ಗಾಯಿಸಿಕೊಂಡಿದ್ದಾರೆ. ಇದು 20 ವರ್ಷಗಳ ಹಿಂದೆ ಐಎಫ್‌‌ಎಸ್ ಅಧಿಕಾರಿ ನಾಗರಾಜು ಎಂಬುವರಿಗೆ ಹಂಚಿಕೆಯಾಗಿದ್ದ ನಿವೇಶನ. ಆದರೆ, ನಾಗರಾಜು ಅವರಿಗೆ ಬೆಂಗಳೂರಿನ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ನಿವೇಶನ ಮಂಜೂರಾಗಿದ್ದರಿಂದ ವ್ಯಕ್ತಿಯೊಬ್ಬರು ದೂರು ದಾಖಲಿಸಿ ದ್ದರು. ಹೀಗಾಗಿ, ಇಲ್ಲಿನ ನಿವೇಶನ ವನ್ನು ಮುಡಾಗೆ ನಾಗರಾಜು ಹಿಂತಿರುಗಿಸಿದ್ದರು. ಅವರು ಪಾವತಿಸಿದ್ದ ಮುಂಗಡ ಹಣವನ್ನು ಪ್ರಾಧಿಕಾರವು ಮರು ಪಾವತಿಸಿತ್ತು.ಆದರೆ, ಅದರ ದಾಖಲೆಗಳನ್ನು ಮುಚ್ಚಿಡಲಾ ಗಿತ್ತು.ಈಚೆಗೆಅವರಪತ್ನಿ ಶಶಿಕಲಾ ಅವರಿಗೆ ಈ ನಿವೇಶನವನ್ನು ಅಕ್ರಮವಾಗಿ ವರ್ಗಾಯಿಸಲಾಗಿತ್ತು. ಇದನ್ನು ನಂದೀಶ್‌ ಖರೀದಿಸಿದ್ದು, ₹ 60 ಲಕ್ಷವನ್ನು ಜೆಎಸ್ಎಸ್ ಕಾಲೇಜು ಆವರಣದಲ್ಲಿರುವಎಸ್‌‌ಬಿಐ ಬ್ಯಾಂಕ್‌‌ನ ಶಾಖೆಯಿಂದ ವರ್ಗಾಯಿಸಲಾಗಿದೆ. ಸಾಧಾರಣ ಉಪನ್ಯಾಸಕ ನಂದೀಶ್ ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ತನಿಖೆಯಾಗ ಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್ ಅವರು ಮೇಲ್ನೋಟಕ್ಕೆ ಈ ಪ್ರಕರಣವನ್ನು ತೇಲಿಸಿಬಿಡುವುದು ಸರಿಯಲ್ಲ. ಪ್ರಕರಣ ಗಂಭೀರವಾಗಿದ್ದು, ಸಮಗ್ರ ತನಿಖೆ ನಡೆಸಬೇಕು. ನಂದೀಶ್‌ ಹಂಚೆ ಅವರನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದವಜಾ ಮಾಡಬೇಕು. ಒಂದು ವೇಳೆ ಇದನ್ನು ಇಲ್ಲಿಗೆ ಕೈಬಿಟ್ಟು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದರೆ, ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ ನಡೆಸುತ್ತೇನೆ’ ಎಂದು ಹೇಳಿದರು.

‘ಕಾನೂನುಬದ್ಧವಾಗಿಯೇ ಇದೆ’
‘ಮುಡಾದಿಂದ ನಾನು ಯಾವುದೇ ನಿವೇಶನ ಖರೀದಿಸಿಲ್ಲ. ಮಧ್ಯವರ್ತಿಗಳ ನೆರವಿನಿಂದನಿವೇಶನ ಹುಡುಕುವ ವೇಳೆ ಶಶಿಕಲಾ ಎಂಬುವವರು ನನ್ನ ಪತ್ನಿಗೆ ಒಂದು ನಿವೇಶನ ತೋರಿಸಿದರು. ದಾಖಲೆಗಳನ್ನು ಪರಿಶೀಲಿಸಿದ ವಕೀಲರು, ಕ್ರಯ ಪತ್ರ ಮಾಡಿಸಿಕೊಂಡು ಖರೀದಿಸಬಹುದುಎಂದರು. ನಿವೇಶನದಾರರಿಗೆ ಹಣಕಾಸಿನ ತುರ್ತು ಇದ್ದ ಕಾರಣ ಕರಾರು ಒಪ್ಪಂದ ಮಾಡಿಕೊಂಡಿದ್ದೆವು. ಅದಾಗಿ ಒಂದೂವರೆ ತಿಂಗಳಾದ ಮೇಲೆ ನೋಂದಣಿ ಮಾಡಿಸಿಕೊಂಡೆವು. ಇದರಲ್ಲಿ ಕಾನೂನು ಬಾಹಿರವಾಗಿರುವುದು ಏನಿದೆ’ ಎಂದು ನಂದೀಶ್‌ ಹಂಚೆ ಪ್ರಶ್ನಿಸಿದರು.

‘ಎಲ್ಲವೂ ಕಾನೂನುಬದ್ಧವಾಗಿಯೇ ಇದೆ. ನಿವೇಶನ ಖರೀದಿಸಿರುವುದು ನನ್ನ ಪತ್ನಿ. ಆಕೆಗೆ ನಾನು ಹಣಕಾಸು ಸಹಾಯ ಮಾಡಿದ್ದೇನೆ. ಆರೋಪ ಮಾಡಿರುವುದರ ಹಿಂದೆ ಏನೋ ಪಿತೂರಿ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.