ADVERTISEMENT

ವಾಟ್ಸ್‌ಆ್ಯಪ್‌ನಲ್ಲಿ ಉತ್ತರ ನೋಡಿ ಬರೆದ ವಿದ್ಯಾರ್ಥಿ ಡಿಬಾರ್

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 18:25 IST
Last Updated 25 ಮಾರ್ಚ್ 2019, 18:25 IST
   

ಮೈಸೂರು: ಇಲ್ಲಿನ ಮಾತೃಮಂಡಳಿ ಶಾಲೆಯಲ್ಲಿ 35 ವರ್ಷದ ಮುಜಾಹಿದ್ ಪಾಷಾ ಎಂಬ ಎಸ್ಸೆಸ್ಸೆಲ್ಸಿ ಖಾಸಗಿ ವಿದ್ಯಾರ್ಥಿ ಸೋಮವಾರ ವಾಟ್ಸ್‌ಆ್ಯಪ್‌ನಲ್ಲಿ ಉತ್ತರ ನೋಡಿ ಬರೆಯುತ್ತಿದ್ದಾಗ ವಿಚಕ್ಷಣ ದಳದ ಬಲೆಗೆ ಬಿದ್ದಿದ್ದಾನೆ.

ಗಣಿತ ಪತ್ರಿಕೆಯ ಪ್ರಶ್ನೆಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸುತ್ತಿದ್ದ. ಇದಕ್ಕೆ ವಾಪಸು ಉತ್ತರ ಬರುತ್ತಿತ್ತು. ಇದನ್ನು ನೋಡಿ ಬರೆಯುತ್ತಿದ್ದಾಗ ಅಧಿಕಾರಿಗಳ ತಂಡ ಸೆರೆ ಹಿಡಿದಿದೆ.

ಸ್ಮಾರ್ಟ್ ಫೋನನ್ನು ತನ್ನ ಒಳ ಉಡುಪಿನಲ್ಲಿ ಇರಿಸಿಕೊಂಡು ಪರೀಕ್ಷಾ ಕೊಠಡಿ ಪ್ರವೇಶಿಸಿದ್ದ. ಕೊಠಡಿಯಲ್ಲಿ ಮಹಿಳಾ ಮೇಲ್ವಿಚಾರಕಿ ಇದ್ದರು.

ADVERTISEMENT

ಪರೀಕ್ಷಾ ಕೇಂದ್ರದ ಅಧೀಕ್ಷಕ ಮಹದೇವಸ್ವಾಮಿ, ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉತ್ತರ ಕಳುಹಿಸುತ್ತಿದ್ದವರ ನಂಬರ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.