ADVERTISEMENT

24 ಗಂಟೆಯಲ್ಲಿ ಕ್ರಿಯಾ ಯೋಜನೆ ಸಲ್ಲಿಸಿ: ಆರೋಗ್ಯ ಸಚಿವ ಶ್ರೀರಾಮುಲು

ಕೋವಿಡ್‌ ಆತಂಕ–ದಸರಾ ಆಚರಣೆ ಸಂಬಂಧ ಮೈಸೂರಿಗೆ ತಜ್ಞರ ತಂಡ: ಆರೋಗ್ಯ ಸಚಿವ ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 2:00 IST
Last Updated 8 ಅಕ್ಟೋಬರ್ 2020, 2:00 IST
ಆರೋಗ್ಯ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಕೋವಿಡ್‌ ಹಾಗೂ ದಸರೆಗೆ ಸಂಬಂಧಿಸಿದ ಸಭೆ ಬುಧವಾರ ನಡೆಯಿತು. ತನ್ವೀರ್‌ ಸೇಠ್‌, ರೋಹಿಣಿ ಸಿಂಧೂರಿ, ಎಚ್‌.ವಿಶ್ವನಾಥ್‌, ಪ್ರತಾಪಸಿಂಹ ಇದ್ದಾರೆ
ಆರೋಗ್ಯ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಕೋವಿಡ್‌ ಹಾಗೂ ದಸರೆಗೆ ಸಂಬಂಧಿಸಿದ ಸಭೆ ಬುಧವಾರ ನಡೆಯಿತು. ತನ್ವೀರ್‌ ಸೇಠ್‌, ರೋಹಿಣಿ ಸಿಂಧೂರಿ, ಎಚ್‌.ವಿಶ್ವನಾಥ್‌, ಪ್ರತಾಪಸಿಂಹ ಇದ್ದಾರೆ   

ಮೈಸೂರು: ‘ಕೋವಿಡ್-19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ದಸರಾ ಆಚರಿಸುವ ಸಂಬಂಧ ಆರೋಗ್ಯ ಇಲಾಖೆತಾಂತ್ರಿಕ ತಜ್ಞರ ತಂಡವನ್ನು ಮೈಸೂರಿಗೆ ಕಳುಹಿಸಲಾಗುವುದು. ಈ ತಂಡ ವರದಿ ನೀಡಿದ 24 ಗಂಟೆಯೊಳಗೆ ಸ್ಥಳೀಯ ಅಧಿಕಾರಿಗಳು ಕ್ರಿಯಾ ಯೋಜನೆ ಸಿದ್ಧ ಪಡಿಸಬೇಕು’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲುಸೂಚನೆ ನೀಡಿದರು.

ನಾಡಹಬ್ಬ ದಸರಾ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ತೆಗೆದು ಕೊಳ್ಳುವವಿಚಾರ ವಾಗಿಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಮೈಸೂರಿನಲ್ಲಿ ಕೋವಿಡ್‌ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾ ಗುತ್ತಿವೆ. ಇದನ್ನು ಮನಗಂಡು ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರೆ ಆಚರಣೆ ಮಾಡಲಾಗುವುದು.ಅದಕ್ಕಾಗಿದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ಇರಬೇಕೇ, ಎಷ್ಟು ಜನರು ಸೇರಿಸಬೇಕು ಎಂಬುದರ ಬಗ್ಗೆ ಸದ್ಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ಈ ವಿಚಾರವಾಗಿ ಆರೋಗ್ಯ ಇಲಾಖೆ ನಿರ್ದೇಶಕರ ನೇತೃತ್ವದ ತಾಂತ್ರಿಕ ತಜ್ಞರ ಸಮಿತಿ ಬಂದು ಮಾಹಿತಿ ಕಲೆಹಾಕಲಿದೆ. ಸಮಿತಿಯಲ್ಲಿ ಸ್ಥಳೀಯ ಅಧಿಕಾರಿಗಳೂ ಇರುತ್ತಾರೆ.ನಾಡಹಬ್ಬ ಆಚರಣೆವೇಳೆ ಸೋಂಕು ಹೆಚ್ಚಳವಾಗಿಏನಾದರೂ ಅನಾಹುತವಾದರೆ ಹೇಗೆ ನಿಭಾಯಿ ಸುತ್ತೀರಿ ಎಂಬ ಅಂಶ ಕ್ರಿಯಾ ಯೋಜನೆಯಲ್ಲಿ ಇರಬೇಕು. ಬಳಿಕ ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸಿ ಅಂತಿಮತೀರ್ಮಾನಕ್ಕೆ ಬರಲಾಗುವುದು’ಎಂದರು.

‘ಸಾರ್ವಜನಿಕರು ಕೂಡ ಸರ್ಕಾ ರದ ಮೇಲೆ ಜವಾಬ್ದಾರಿ ಹಾಕಿ ಸುಮ್ಮನಿರಬಾರದು. ನಮಗೂ ಜನರಸಹಕಾರ ಅಗತ್ಯವಾಗಿರುತ್ತದೆ. ಅಂತರ ಕಾಯ್ದುಕೊಂಡು, ಮಾಸ್ಕ್‌ ಧರಿಸಿ ಸುರಕ್ಷತೆಯಿಂದ ನಡೆಸಲು ಅವ ಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು.

ಮೈಸೂರು ನಗರದಲ್ಲಿ ಕೋವಿಡ್‌ಗೆ ಸಂಬಂಧಿಸಿದಂತೆ ಹಾಸಿಗೆ, ವೆಂಟಿಲೇಟರ್‌, ಸೋಂಕಿತರ ಸಂಖ್ಯೆಯ ಮಾಹಿತಿಯನ್ನು ಜಿಲ್ಲಾ ಆರೋ ಗ್ಯಾಧಿಕಾರಿ ಡಾ.ವೆಂಕಟೇಶ್ ಅವರಿಂದ ಪಡೆದುಕೊಂಡರು. ಸೋಂಕು ಪತ್ತೆ ಪ್ರಕ್ರಿಯೆ ಚುರುಕು ಪಡೆಯಬೇಕಿದೆ, ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಬೇಕಿದೆ ಎಂದು ಸೂಚನೆ ನೀಡಿದರು.

ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ದಸರಾ ಆಚರಣೆಯನ್ನು ತೀರಾ ಸರಳವಾಗಿ ಆಚರಿಸಬೇಕು ಎಂದು ಜನಪ್ರತಿನಿಧಿಗಳು ಸಲಹೆ ನೀಡಿದರು.

ಸಭೆಯಲ್ಲಿ ಸಂಸದ ಪ್ರತಾಪಸಿಂಹ, ಶಾಸಕರಾದ ತನ್ವೀರ್‌ ಸೇಠ್‌, ಬಿ.ಹರ್ಷವರ್ಧನ, ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್‌, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಪರಿಮಳಾ ಶ್ಯಾಂ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪಂಚಾಯಿತಿ ಸಿಇಒ ಡಿ.ಭಾರತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.