ADVERTISEMENT

ವಿದ್ಯಾರ್ಥಿಗಳು ಜ್ಞಾನ ದಾಹ ಹೊಂದಿ

ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸ್ವಾಮಿ ಮುಕ್ತಿದಾನಂದ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 15:13 IST
Last Updated 4 ಡಿಸೆಂಬರ್ 2022, 15:13 IST
ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ದಿನೇಶ್‌ ಕೋಚಿಂಗ್‌ ಸೆಂಟರ್‌ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸ್ವಾಮಿ ಮುಕ್ತಿದಾನಂದ ಮಹಾರಾಜ್‌ ಮಾತನಾಡಿದರು. ಎನ್‌.ವಿ.ದಿನೇಶ್‌, ಸ್ವಾಮಿ ವಿರೇಶಾನಂದ ಸರಸ್ವತಿ ಇದ್ದಾರೆ
ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ದಿನೇಶ್‌ ಕೋಚಿಂಗ್‌ ಸೆಂಟರ್‌ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸ್ವಾಮಿ ಮುಕ್ತಿದಾನಂದ ಮಹಾರಾಜ್‌ ಮಾತನಾಡಿದರು. ಎನ್‌.ವಿ.ದಿನೇಶ್‌, ಸ್ವಾಮಿ ವಿರೇಶಾನಂದ ಸರಸ್ವತಿ ಇದ್ದಾರೆ   

ಮೈಸೂರು:‘ವಿದ್ಯಾರ್ಥಿಗಳು ಅಂಕದ ಜೊತೆಗೆ ಸತತವಾದ ಜ್ಞಾನ ದಾಹ ಹೊಂದಬೇಕು’ ಎಂದು ರಾಮಕೃಷ್ಣ ಮಠದ ಸ್ವಾಮಿ ಮುಕ್ತಿದಾನಂದ ಹೇಳಿದರು.

ನಗರದ ಕಲಾಮಂದಿರದಲ್ಲಿ ಭಾನುವಾರ ದಿನೇಶ್‌ ಕೋಚಿಂಗ್‌ ಸೆಂಟರ್‌ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ‘ಯಾವುದೇ ಕ್ಷೇತ್ರದಲ್ಲಿ ಸದ್ಗುಣ ಸಂಪನ್ನತೆ ಆಧಾರದಲ್ಲಿ ಯೋಗ್ಯದಿಂದ ಪ್ರಯತ್ನ ಪಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂದರು.

‘ಮಗುವಿಗೆ ಮನೆಯೊಳಗೆ ಸುಲಭವಾಗಿ, ಸರಳವಾಗಿ ಒಳ್ಳೆಯ ಸಂಸ್ಕಾರ ನೀಡುವಂತಹ ಪದ್ಧತಿ ನಮ್ಮಲಿದೆ. ಆದರೆ, ಅದನ್ನು ಯಾರೂ ಮುಂದುವರಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಇಂದಿನ ಮಕ್ಕಳಲ್ಲಿ ಮನರಂಜನೆ ಎಂಬ ಪಿಡುಗು ಆವರಿಸಿದೆ. ಮನರಂಜನೆಯನ್ನು ಊಟದಲ್ಲಿನ ಉಪ್ಪಿನ ಕಾಯಿಯಂತೆ ಬಳಸಿದರೆ ಒಳಿತು. ಇಲ್ಲವಾದರೆ ಅಮೂಲ್ಯವಾದ ವಿದ್ಯಾರ್ಥಿ ದೆಸೆಯಲ್ಲಿನಬದುಕು ನಾಶವಾಗಲಿದೆ. ಇದರಿಂದ ರಕ್ಷಿಸಿಕೊಳ್ಳಲು ವಿದ್ಯಾರ್ಥಿಗಳೊಂದಿಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ದೇಶಗಳು ಅಣು ಬಾಂಬ್‌ ಹಿಡಿದುಕೊಂಡರೆ ಸೂಪರ್‌ ಪವರ್‌ ಆಗುವುದಲ್ಲ. ಬದಲಿಗೆ ಒಳ್ಳೆಯ ಆದರ್ಶ ಜೀವನದ ಶಕ್ತಿ ಹೊಂದಬೇಕು. ಅದುವೇ ಸೂಪರ್‌ ಪವರ್‌. ಇಂದು ವಿದೇಶಿಗರು ಭಾರತಕ್ಕೆ ಆಗಮಿಸಿ ಇಲ್ಲಿನ ಆಧ್ಯಾತ್ಮ, ಯೋಗ ಹಾಗೂ ಜ್ಞಾನ ಪಡೆಯುತ್ತಿದ್ದಾರೆ. ಇದು ನಮ್ಮ ದೇಶದ ಸಂಸ್ಕೃತಿಯ ಶಕ್ತಿ’ ಎಂದರು.

ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವಿರೇಶಾನಂದ ಸರಸ್ವತಿ ಮಾತನಾಡಿ, ‘ಶೈಕ್ಷಣಿಕ ವೃದ್ಧಿಯೊಂದಿಗೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವಲ್ಲಿವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದರು.

ಎನ್‌.ವಿ.ದಿನೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.