ಮೈಸೂರು: ಈಶಾನ್ಯ ರಾಜ್ಯವೊಂದರ ವ್ಯಕ್ತಿಗೆ ಪ್ರವೇಶ ನಿರಾಕರಿಸಿ ಜನಾಂಗೀಯ ತಾರತಮ್ಯ ಎಸಗಿದ ಆರೋಪದ ಮೇರೆಗೆ ನಗರದ ಸೂಪರ್ ಮಾರ್ಕೆಟ್‌ವೊಂದರ ನಾಲ್ವರು ಸಿಬ್ಬಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.
ಮಂಜುನಾಥ್ (32), ನವೀನ್ (30), ಅವಿನಾಶ್ (26) ಹಾಗೂ ರೇವಣ್ಣ (30) ಬಂಧಿತರು. ಇವರ ವಿರುದ್ಧ ಐಪಿಸಿ ಸೆಕ್ಷನ್ 153ಎ(1)(ಬಿ) (ದ್ವೇಷ ಭಾವನೆ ಹೆಚ್ಚಿಸುವುದು), 341 (ಅಕ್ರಮವಾಗಿ ತಡೆಯುವುದು) 290 (ಸಾರ್ವಜನಿಕರಿಗೆ ತೊಂದರೆಕೊಡುವುದು) ಅನ್ವಯ ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈಶಾನ್ಯ ರಾಜ್ಯದ ವ್ಯಕ್ತಿ ಮೇಲ್ನೋಟಕ್ಕೆ ಚೀನಿಯರಂತೆ ಕಾಣುತ್ತಿದ್ದರು. ಕೆಲವು ಸಾರ್ವಜನಿಕರು ಅವರ ಪ್ರವೇಶಾತಿಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಸೂಪರ್‌ಮಾರ್ಕಟ್‌ನ ಸಿಬ್ಬಂದಿ ಪ್ರವೇಶ ನಿರಾಕರಿಸಿದರು. ಈ ಕುರಿತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ನಗರ ಪೊಲೀಸರು ಕ್ರಮಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.