ವಂಚನೆ
ತಿ.ನರಸೀಪುರ: ಪುರಸಭೆಗೆ ಪಾವತಿಸಬೇಕಿದ್ದ ತೆರಿಗೆಯನ್ನು ನಕಲಿ ದಾಖಲೆ ಸೃಷ್ಟಿಸಿ ವಂಚಿಸಿರುವ ಬಗ್ಗೆ ಪುರಸಭಾ ಸದಸ್ಯರೊಬ್ಬರು ಸೇರಿದಂತೆ 9 ತೆರಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಟ್ಟಣದ ಪುರಸಭಾ ಮುಖ್ಯಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪುರಸಭಾ ಕಚೇರಿಯಿಂದ ತೆರಿಗೆ ಪಾವತಿಸಲು ಪಡೆಯಲಾಗಿದ್ದ ಚಲನ್‌ಗಳನ್ನು ತೆರಿಗೆದಾರರು ಬ್ಯಾಂಕಿನ ಮೊಹರಿರುವ ಚಲಲಿಿಗಳನ್ನು ಪುರಸಭಾ ಕಚೇರಿಗೆ ನೀಡಿದ್ದಾರೆ. ಆದರೆ ಬ್ಯಾಂಕ್ ಚಲನ್ ಹಾಗೂ ಪುರಸಭಾ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಚಲಲಿಿನಲ್ಲಿರುವ ಹಣ ಪುರಸಭಾ ಬ್ಯಾಂಕ್ ಖಾತೆಗೆ ಜಮಾ ಆಗಿರುವುದಿಲ್ಲ.
ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಪತ್ರ ಬರೆದು ಪರಿಶೀಲಿಸಿದಾಗ ಹಣ ಪಾವತಿಸಿರುವ ಯಾವ ದಾಖಲೆಗಳು ಲಭ್ಯವಾಗಿಲ್ಲ. ಚಲಲಿಿಗಳಿಗೆ ನಕಲಿ ಮೊಹರ್ ಬಳಸಿ ₹3,43,626 ವಂಚಿಸಲಾಗಿದೆ. ಕೆಲ ಆಸ್ತಿ ಮಾಲೀಕರು ಸದಸ್ಯ ಟಿ.ಎಂ.ನಂಜುಂಡಸ್ವಾಮಿ ಸಹಕಾರದೊಂದಿಗೆ ಪುರಸಭೆಗೆ ವಂಚಿಸಿದ್ದು, ಇವರ ವಿರುದ್ಧ ತನಿಖೆ ಕೈಗೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.