ADVERTISEMENT

ಭಾರತದ ಹಬ್ಬದಲ್ಲಿ ಸಂಸ್ಕೃತಿಯ ಸೊಬಗು ಅಡಗಿದೆ: ಆರ್‌ಎಸ್‌ಎಸ್‌ ಮುಖಂಡ ಸು. ರಾಮಣ್ಣ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 13:42 IST
Last Updated 18 ಜನವರಿ 2026, 13:42 IST
<div class="paragraphs"><p>ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮೈಸೂರು ಜಿಲ್ಲಾ ಸಮಿತಿಯು ಭಾನುವಾರ ಇಲ್ಲಿನ ಸಿದ್ಧಾರ್ಥ ನಗರದ ವಿನಯ ಮಾರ್ಗದಲ್ಲಿ ಆಯೋಜಿಸಿದ್ದ ಮೈಸೂರು ಜಿಲ್ಲಾ ಅಧಿವೇಶನ</p></div>

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮೈಸೂರು ಜಿಲ್ಲಾ ಸಮಿತಿಯು ಭಾನುವಾರ ಇಲ್ಲಿನ ಸಿದ್ಧಾರ್ಥ ನಗರದ ವಿನಯ ಮಾರ್ಗದಲ್ಲಿ ಆಯೋಜಿಸಿದ್ದ ಮೈಸೂರು ಜಿಲ್ಲಾ ಅಧಿವೇಶನ

   

ಮೈಸೂರು: ‘ಭಾರತ ಹಬ್ಬಗಳ ತವರು. ಇಲ್ಲಿ ಸಂಸೃತಿ ಸಂಪನ್ನತೆ ನಮ್ಮ ರಕ್ತದಲ್ಲಿ ಹಾಸು ಹೊಕ್ಕಾಗಿದೆ. ನಮ್ಮ ಹಬ್ಬಗಳಲ್ಲಿ ಸಂಭ್ರಮದ ಜೊತೆಗೆ ಸಂಸ್ಕೃತಿಯ ಸೊಬಗು ಮನೆ ಮಾಡಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಸು.ರಾಮಣ್ಣ ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮೈಸೂರು ಜಿಲ್ಲಾ ಸಮಿತಿಯು ಭಾನುವಾರ ಇಲ್ಲಿನ ಸಿದ್ಧಾರ್ಥ ನಗರದ ವಿನಯ ಮಾರ್ಗದಲ್ಲಿ ಆಯೋಜಿಸಿದ್ದ ಮೈಸೂರು ಜಿಲ್ಲಾ ಅಧಿವೇಶನದಲ್ಲಿ ಸಂಕ್ರಾಂತಿ ಕುರಿತು ಅವರು ಮಾತನಾಡಿದರು.

ADVERTISEMENT

‘ಸಮಗ್ರ ಕ್ರಾಂತಿ ಎಂಬುದೇ ಸಂಕ್ರಾಂತಿ. ಬದಲಾವಣೆ ಎಂಬುದು ಕ್ರಮೇಣ ಆಗುವಂತಹ ಪ್ರಕ್ರಿಯೆ’ ಎಂದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ವಿರಚಿತ ‘ಚರಿತ ಚಂಪಕ’, ‘ಸಾಹಿತ್ಯದ ಸ್ವತ್ವ’, ಕೊ.ಲಾ. ನಾಗರಾಜು ವಿರಚಿತ ‘ಕೊಪ್ಪಲಿನ ಕತೆಗಳು’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಗೂಗಲ್ ಉಪನ್ಯಾಸ ಮಾಲಿಕೆಯಲ್ಲಿ ಪಾಲ್ಗೊಂಡಿದ್ದ ಐವತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ವಿವಿಧ ಕೂಟಗಳ ಸದಸ್ಯರಿಂದ ಹಾಸ್ಯರಸಾಯನ ಹಾಗೂ ಮಕ್ಕಳ ಕೂಟದಿಂದ ಛದ್ಮವೇಷ ಸ್ಪರ್ಧೆ ನಡೆಸಲಾಯಿತು.

ಪ್ರಾಂತ ಸಂಪರ್ಕ ಪ್ರಮುಖ್ ವಿ.ರಂಗನಾಥ್, ರಾಜ್ಯ ಉಪಾಧ್ಯಕ್ಷ ಬೆಳಗೋಡು ರಮೇಶ್ ಭಟ್, ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ಮಹಾರಾಜ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಎಸ್.ಮುರಳಿ, ರಾಘವೇಂದ್ರ ಶೆಟ್ಟಿ, ಜಿಲ್ಲಾ ಅಧ್ಯಕ್ಷ ಸುಬ್ರಹ್ಮಣ್ಯ, ಕಾರ್ಯದರ್ಶಿ ಸು.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.