ADVERTISEMENT

ಲಕ್ಷ್ಮಣತೀರ್ಥ ಸಂರಕ್ಷಣೆಗೆ ಯೋಜನೆ ಸಿದ್ಧ: ಆರ್.ಟಿ.ಸತೀಶ್

ಕೊಳಚೆ ನೀರು ನದಿ ಸೇರದಂತೆ ಕ್ರಮ: ಕೊಳಚೆ ನಿರ್ಮೂಲನಾ ಮಂಡಳಿ ನಿರ್ದೇಶಕ ಸತೀಶ್

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 2:08 IST
Last Updated 5 ಅಕ್ಟೋಬರ್ 2020, 2:08 IST
ಹುಣಸೂರು ನಗರಕ್ಕೆ ಕೊಳಚೆ ನಿರ್ಮೂಲನಾ ಮಂಡಳಿ ನಿರ್ದೇಶಕ ಆರ್.ಟಿ. ಸತೀಶ್ ಭಾನುವಾರ ಭೇಟಿ ನೀಡಿ ಲಕ್ಷ್ಮಣತೀರ್ಥ ನದಿ ಮತ್ತು ಕೊಳೆಗೇರಿ ಪ್ರದೇಶಗಳ ಸ್ಥಿತಿಗತಿ ವೀಕ್ಷಿಸಿದರು
ಹುಣಸೂರು ನಗರಕ್ಕೆ ಕೊಳಚೆ ನಿರ್ಮೂಲನಾ ಮಂಡಳಿ ನಿರ್ದೇಶಕ ಆರ್.ಟಿ. ಸತೀಶ್ ಭಾನುವಾರ ಭೇಟಿ ನೀಡಿ ಲಕ್ಷ್ಮಣತೀರ್ಥ ನದಿ ಮತ್ತು ಕೊಳೆಗೇರಿ ಪ್ರದೇಶಗಳ ಸ್ಥಿತಿಗತಿ ವೀಕ್ಷಿಸಿದರು   

ಹುಣಸೂರು: ‘ನಗರದ ತ್ಯಾಜ್ಯ ನೀರು ಜೀವನದಿ ಲಕ್ಷ್ಮಣತೀರ್ಥಕ್ಕೆ ಸೇರಿ ಕಲುಷಿತಗೊಂಡಿದ್ದು ತ್ಯಾಜ್ಯ ನೀರು ನದಿ ಸೇರದಂತೆ ಒಳಚರಂಡಿ ಯೋಜನೆ ಸಿದ್ಧಪಡಿಸಿದೆ’ ಎಂದು ಕೊಳಚೆ ನಿರ್ಮೂಲನಾ ಮಂಡಳಿ ನಿರ್ದೇಶಕ ಆರ್.ಟಿ.ಸತೀಶ್ ಹೇಳಿದರು.

ನಗರ ವ್ಯಾಪ್ತಿ ವಿವಿಧ ಕೊಳೆಗೇರಿ ಬಡಾವಣೆ ಹಾಗೂ ಕುಡಿಯುವ ನೀರಿನ ಘಟಕ ಮತ್ತು ತ್ಯಾಜ್ಯ ನೀರು ಸಂಗ್ರಹ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ನಂತರ ಅವರು ಮಾತನಾಡಿದರು.

‘ನಗರ ವ್ಯಾಪ್ತಿ ನದಿಗೆ ತ್ಯಾಜ್ಯ ನೀರು ಸೇರಿ ಕಲುಷಿತಗೊಂಡಿದ್ದು, ಮಳೆಗಾಲದಲ್ಲಿ ಕಲುಷಿತ ನೀರು ಕಾವೇರಿ ನದಿ ಸೇರಿ ಮೈಸೂರು ಸೇರಿದಂತೆ ವಿವಿಧ ನಗರಗಳ ಪೂರೈಕೆಯಾಗುವ ಕುಡಿಯುವ ನೀರು ಕಲುಷಿತಗೊಳ್ಳುತ್ತಿದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸೋಮಣ್ಣ ತ್ಯಾಜ್ಯ ನೀರು ನದಿಗೆ ಸೇರದಂತೆ ಯೋಜನೆ ಸಿದ್ಧಪಡಿಸಲು ಸೂಚಿಸಿದ್ದರು. ಅದರಂತೆ ನಗರಸಭೆ ₹ 80 ‌ಕೋಟಿ ವೆಚ್ಚ ಒಳಚರಂಡಿ ಯೋಜನೆ ಸಿದ್ಧಪಡಿಸಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ’ ಎಂದರು.

ADVERTISEMENT

‘ಸರ್ಕಾರದಲ್ಲಿರುವ ಯೋಜನೆ ಯನ್ನು ಮಂಡಳಿಯಿಂದ ಮತ್ತಷ್ಟು ಒತ್ತಡ ತಂದು ಯೋಜನೆ ಜಾರಿಗೊಳಿಸುವ ಜವಾಬ್ದಾರಿ ವಹಿಸುವುದಾಗಿ’ ಹೇಳಿದರು.

‘ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರು ಸಂಗ್ರಹಿಸಿ ಶುದ್ದೀಕರಣ ಮಾಡಿ ಕೃಷಿ ಚಟುವಟಿಕೆಗೆ ಬಳಸುವ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಅದನ್ನು ಸಮರ್ಪಕವಾಗಿ ಬಳಸಿ ಲಕ್ಷ್ಮಣತೀರ್ಥ ನದಿ ಉಳಿವಿಗೆ ಬಿಜೆಪಿ ಸಿದ್ಧವಿದೆ’ ಎಂದರು.

ಮಂಡಳಿ ನಿರ್ದೇಶಕರ ಭೇಟಿ ಸಮಯದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗಾನಂದಕುಮಾರ್, ನಗರಸಭೆ ಸದಸ್ಯ ಗಣೇಶ್ ಕುಮಾರಸ್ವಾಮಿ, ಪೌರಾಯುಕ್ತ ಮಂಜುನಾಥ್ ಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.