ADVERTISEMENT

ಮೈಸೂರು: ಕಿಟಕಿ ತೆರೆದು ಮಲಗಿದ್ದೇ ಮುಳುವಾಯಿತು!

ಕೊನೆಗೂ ಬಗೆಹರಿಯಿತು ಪೊಲೀಸರ ಮನೆಯ ಕಳವಿನ ರಹಸ್ಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 4:42 IST
Last Updated 10 ನವೆಂಬರ್ 2020, 4:42 IST

ಮೈಸೂರು: ಇಲ್ಲಿನ ಸರಸ್ವತಿಪುರಂ ನಿವಾಸಿ ಹಾಗೂ ಪೊಲೀಸ್ ಸಿಬ್ಬಂದಿಯೊಬ್ಬರ ನಿವಾಸದಲ್ಲಿ ಸೆ. 1ರಂದು 2 ಕೆ.ಜಿಯಷ್ಟು ಕಳವಾಗಿದ್ದ ಚಿನ್ನದ ರಹಸ್ಯವನ್ನು ನಗರ ಅಪರಾಧ ಪತ್ತೆ ವಿಭಾಗದ ಪೊಲೀಸರು ಕೊನೆಗೂ ಬೇಧಿಸುವಲ್ಲಿ ಸಫಲರಾಗಿದ್ದಾರೆ. ಇವರ ಮನೆಯಿಂದ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಿಟಕಿ ತೆರೆದೆಟ್ಟಿದ್ದೇ ಕಳವಿಗೆ ಕಾರಣ ಎಂಬುದು ಗೊತ್ತಾಗಿದೆ.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿಸಿಪಿ ಗೀತಾ ಪ್ರಸನ್ನ ಅವರು, ‘ಕುಣಿಗಲ್‍ನ ಲಿಂಗರಾಜು ಅಲಿಯಾಸ್ ಸೈಯದ್ ಶಾಹೀದ್ (38), ಹುಬ್ಬಳ್ಳಿಯ ನವನಗರದ ಸೈಯದ್ ನವಾದ್ (40) ಬಂಧಿತರಾಗಿದ್ದಾರೆ. ಮತ್ತೊಬ್ಬ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ. ಇವರಿಂದ 1 ಕೆ.ಜಿ. 439 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಅರ್ಧ ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಳ್ಳಬೇಕಾಗಿದೆ’ ಎಂದು ತಿಳಿಸಿದರು.

ಅಶೋಕ ರಸ್ತೆಯಲ್ಲಿರುವ ಆಭರಣ ಅಂಗಡಿ ಬಳಿ ಅನುಮಾನಾಸ್ಪದವಾಗಿ ಚಿನ್ನಾಭರಣಗಳನ್ನು ಅಡವಿಟ್ಟು ಬಂದಿದ್ದ ಇವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಇವರು ಸರಸ್ವತಿಪುರಂನಲ್ಲಿ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ADVERTISEMENT

ಬಂಧಿತ ಆರೋಪಿಗಳ ಪೈಕಿ ಸೈಯದ್ ನವಾಬ್ ಎಂಬಾತ 2018ರ ನವೆಂಬರ್‌ನಲ್ಲಿ ಇಲ್ಲಿನ ಬನ್ನಿಮಂಟಪದಲ್ಲಿ ಮನೆಯೊಂದರಲ್ಲಿ ಇಟ್ಟಿದ್ದ ಒಂದು ಪರ್ಸ್‍ನೊಳಗಿದ್ದ ಚಿನ್ನದ ಬಳೆಗಳನ್ನು ಕಳವು ಮಾಡಿದ್ದ ಎಂದರು.

ಎಸಿಪಿ ಮರಿಯಪ್ಪ ಅವರ ನೇತೃತ್ವದಲ್ಲಿ ಸಿಸಿಬಿಯ ಇನ್‌ಸ್ಪೆಕ್ಟರ್ ಆರ್.ಜಗದೀಶ್ ಈ ಕಾರ್ಯಾಚರಣೆ ನಡೆಸಿದ್ದರು.

ಎಎಸ್‌ಐಗಳಾದ ಯು.ಉಮೇಶ್, ಡಿ.ಜಿ.ಚಂದ್ರೇಗೌಡ, ಅಲೆಕ್ಸಾಂಡರ್, ಸಿಬ್ಬಂದಿಯಾದ ರಾಮಸ್ವಾಮಿ, ಚಿಕ್ಕಣ್ಣ, ಪರಮೇಶ, ಶಿವರಾಜು, ಲಕ್ಷ್ಮೀಕಾಂತ, ಗಣೇಶ್, ಯಾಕೂಬ್ ಷರೀಪ್, ಸಲೀಂ ಪಾಷ, ಶ್ರೀನಿವಾಸ ಪ್ರಸಾದ್, ಆನಂದ್, ಅನಿಲ್, ಚಂದ್ರಶೇಖರ್, ಸಿ.ಎಂ.ಮಂಜು, ಕುಮಾರ್ ರಾಜಶ್ರೀ ಜಾಲವಾದಿ, ಗೌತಮ್, ಸೋಮು ತಾಂತ್ರಿಕ ಕೋಶದ ಇನ್‌ಸ್ಪೆಕ್ಟರ್ ಟಿ.ಎಸ್.ಲೋಲಾಕ್ಷಿ ಸಿಬ್ಬಂದಿಯಾದ ಗುರುದೇವಾರಾಧ್ಯ, ಸಿ.ಎಂ.ಮಂಜು, ಶ್ಯಾಂ ಸುಂದರ್, ಪಿ.ಕುಮಾರ್ ಕಾರ್ಯಾಚರಣೆ ತಂಡದಲ್ಲಿ ಇದ್ದರು ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.