ಮೈಸೂರು: ‘ಉಷಸ್ ಪ್ರೊಡಕ್ಷನ್ ಸಂಸ್ಥೆಯಿಂದ ವಿ.ದೇವದಾಸ್ ನಿರ್ದೇಶನದಲ್ಲಿ ಮಲಯಾಳಂ ಭಾಷೆಯಲ್ಲಿ ‘ಏಕಾಂತತೆ’ ಶೀರ್ಷಿಕೆಯ ಕಿರುಚಿತ್ರ ನಿರ್ಮಿಸಿದ್ದು, ಸೆ.28ರಂದು ಸಂಜೆ 6ಕ್ಕೆ ಇಲ್ಲಿನ ವಿಜಯನಗರ ನಾಲ್ಕನೇ ಹಂತದ 1ನೇ ಫೇಸ್‌ನ ಕಲ್ಪಕ್ಷೇತ್ರ ಸಭಾಂಗಣದಲ್ಲಿ ಪ್ರದರ್ಶನ ಆಯೋಜಿಸಲಾಗಿದೆ’ ಎಂದು ಚಿತ್ರದ ನಟಿ, ನಿರ್ಮಾಪಕಿ ಇಂದಿರಾ ನಾಯರ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿರಿಯ ನಾಗರಿಕರು ಒಂಟಿತನವನ್ನು ಹೇಗೆ ಎದುರಿಸಬಲ್ಲರು, ಈ ವೇಳೆ ಉಂಟಾಗುವ ಮಾನಸಿಕ ತೊಳಲಾಟದ ವಿಷಯವಸ್ತುವನ್ನಾಗಿಸಿ ಕಿರುಚಿತ್ರ ಮಾಡಲಾಗಿದೆ. ನಂದನ ವಿನೋದ್, ರಾಜೇಶ್ ಮಾಧವ ಅವರು ನಟಿಸಿದ್ದು, ಕಮಲ್ ತುಳಸಿ ಸಂಗೀತ ನೀಡಿದ್ದಾರೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಛಾಯಾಗ್ರಾಹಕ ವಿನಯ್ ರಾಮ್ಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.