ADVERTISEMENT

ನಿಲ್ಲದ ಹುಲಿ ದಾಳಿ; ಕರು ಬಲಿ, ಜನರ ಮೇಲೂ ಮತ್ತೆ ದಾಳಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 20:21 IST
Last Updated 4 ಫೆಬ್ರುವರಿ 2019, 20:21 IST

ಎಚ್.ಡಿ.ಕೋಟೆ: ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಮತ್ತೆ ಹುಲಿ ದಾಳಿ ಮುಂದುವರಿದಿದೆ.

ಇದರಿಂದಾಗಿ ಸೆರೆ ಹಿಡಿಯಲಾದ ಹುಲಿಯು ಮನುಷ್ಯರ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯೇ ಎಂಬ ಅನುಮಾನಗಳು ಮೂಡಿವೆ.

ತಿಮ್ಮನಹೊಸಹಳ್ಳಿ ಸಮೀಪದ ರಸ್ತೆಯಲ್ಲಿ ವೆಂಕಟೇಗೌಡ ಎಂಬುವವರನ್ನು ಹುಲಿ ಅಟ್ಟಾಡಿಸಿದ್ದು, ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದಾರೆ. ನಂತರ, ಕೆಲವೇ ನಿಮಿಷಗಳಲ್ಲಿ ಸಮೀಪದ ಮಚ್ಚೂರಿನ ಶಿವಣ್ಣ ಎಂಬುವವರ ಕೊಟ್ಟಿಗೆಗೆ ನುಗ್ಗಿ ಅವರ ಪುತ್ರನ ಮೇಲೆರಗಲು ಯತ್ನಿಸಿದೆ. ಹುಲಿ ಕಂಡ ಕೂಡಲೇ ಮನೆಯೊಳಗೆ ಹೋಗಿ ಬಾಲಕ ಬಾಗಿಲು ಹಾಕಿಕೊಂಡಿದ್ದಾನೆ. ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 2 ವರ್ಷದ ಕರುವನ್ನು ಕೊಂದು ಎಳೆದೊಯ್ದಿದೆ.

ADVERTISEMENT

ಈ ಎರಡು ಘಟನೆಗಳಿಂದ ಸುತ್ತಮುತ್ತ ಗ್ರಾಮಗಳ ಜನರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಸೆರೆ ಹಿಡಿದಿರುವ ಹುಲಿ ಈ ಮೊದಲು ದಾಳಿ ಮಾಡುತ್ತಿದ್ದ ಹುಲಿಯಲ್ಲ. ನರಭಕ್ಷಕ ಹುಲಿ ಇನ್ನೂ ಇಲ್ಲೇ ಇದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.‌‌ ವಲಯ ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಕೂಬಿಂಗ್‌ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.