ಹುಣಸೂರು: ತಾಲ್ಲೂಕಿನ ಕಚುವಿನಹಳ್ಳಿ ಗ್ರಾಮದ ನಿವಾಸಿ ಪ್ರೇಮಮ್ಮ ಮತ್ತು ರೇಣುಕಾ ಭಾನುವಾರ ಹೊಸಕೆರೆ ಕೆರೆ ಏರಿ ಬಳಿ ಕುರಿ ಮೇಯಿಸುತ್ತಿದ್ದಾಗ ಹಠಾತ್ತನೆ ದಾಳಿ ಮಾಡಿದ ಹುಲಿ ಕುರಿಯೊಂದನ್ನು ಕೊಂದು ಹಾಕಿದೆ.
ಗ್ರಾಮದ ಹೊರವಲಯದ ಬಿದಿರು ಮೆಳೆಯಲ್ಲಿ ಅಡಗಿದ್ದ ಹುಲಿ ದಾಳಿ ನಡೆಸಿದ್ದು, ಪ್ರೇಮಮ್ಮ ಕೂಗಿಕೊಂಡಾಗ ದನಗಾಹಿಗಳು ಸಹಾಯಕ್ಕೆ ಬಂದಿದ್ದು, ಹೆಚ್ಚಿನ ಅನಾಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಹುಲಿ ಎರಡು ವರ್ಷಗಳಿಂದ ಜನ–ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದು, ಅರಣ್ಯ ಇಲಾಖೆಅದನ್ನು ಸೆರೆ ಹಿಡಿಯಲು ವಿಫಲವಾಗಿದೆ. ಬೋನು ಇಡುವುದರೊಂದಿಗೆ ಕೊಂಬಿಂಗ್ ನಡೆಸಿ ಬಂಧಿಸಬೇಕು ಎಂದು ಗ್ರಾಮದ ಮುಖಂಡ ಲೋಕೇಶ್ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.