ADVERTISEMENT

ಔತಣಕೂಟಕ್ಕೆ ಬಂದವರಿಗೆ ಸಸಿ ವಿತರಣೆ

ಪರಿಸರ ಕಾಳಜಿ ಮೆರೆದ ಕೆ.ವಿ.ನಾಗೇಂದ್ರ ಮತ್ತು ಸ್ನೇಹಾ ದಂಪತಿ

​ಪ್ರಜಾವಾಣಿ ವಾರ್ತೆ
Published 21 ಮೇ 2019, 20:01 IST
Last Updated 21 ಮೇ 2019, 20:01 IST
ತಿ.ನರಸೀಪುರ ತಾಲ್ಲೂಕಿನ ಕರೊಹಟ್ಟಿ ಗ್ರಾಮದ ನಾಗೇಂದ್ರ ಹಾಗೂ ಸ್ನೇಹಾ ದಂಪತಿ ಸಸಿಗಳನ್ನು ವಿತರಿಸಿದರು
ತಿ.ನರಸೀಪುರ ತಾಲ್ಲೂಕಿನ ಕರೊಹಟ್ಟಿ ಗ್ರಾಮದ ನಾಗೇಂದ್ರ ಹಾಗೂ ಸ್ನೇಹಾ ದಂಪತಿ ಸಸಿಗಳನ್ನು ವಿತರಿಸಿದರು   

ತಿ.ನರಸೀಪುರ: ತಾಲ್ಲೂಕಿನ ಕರೊಹಟ್ಟಿ ಗ್ರಾಮದ ಕೆ.ವಿ.ನಾಗೇಂದ್ರ ಮತ್ತು ಸ್ನೇಹಾ ದಂಪತಿಯು ಬೀಗರೂಟಕ್ಕೆ ಬಂದ ಜನರಿಗೆ ಗಿಡಗಳನ್ನು ನೀಡುವ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ.

ಕೆ.ವಿ.ನಾಗೇಂದ್ರ ಅವರು ಆಂತರಿಕ ಭದ್ರತಾ ವಿಭಾಗದ ಉಪನಿರೀಕ್ಷಕರಾಗಿದ್ದಾರೆ. ಅವರು ಮೇ 16ರಂದು ವಿವಾಹವಾಗಿದ್ದರು. ಗ್ರಾಮದಲ್ಲಿ ಸೋಮವಾರ ಬೀಗರ ಔತಣಕೂಟ ಏರ್ಪಡಿಸಿದ್ದರು. ಇಲ್ಲಿ 600 ತೇಗದ ಗಿಡಗಳನ್ನು ವಿತರಿಸಿದ ದಂಪತಿ, ಅವುಗಳನ್ನು ಬೆಳೆಸುವಂತೆ ಅತಿಥಿಗಳಿಗೆ ಮನವಿ ಮಾಡಿದರು.

‘ಮದುವೆ ವೇಳೆ ಗಿಡಗಳನ್ನು ವಿತರಿಸುವ ಆಸೆ ಇತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಬೀಗರೂಟಕ್ಕೆ ಬರುವವರಿಗೆ ವಿತರಿಸಿದ್ದೇವೆ. ಪರಿಸರ ಸಂರಕ್ಷಣೆ ಮಾಡದಿದ್ದರೆ ಮನುಕುಲದ ಉಳಿಗಾಲ ಇರುವುದಿಲ್ಲ. ತಾಪಮಾನ ಏರಿಕೆಯನ್ನು ಕಡಿಮೆ ಮಾಡಬೇಕಾದರೆ ಅರಣ್ಯವನ್ನು ಬೆಳೆಸಬೇಕು’ ಎಂದು ನಾಗೇಂದ್ರ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.