ADVERTISEMENT

ಉದ್ದೂರು ಕಾವಲ್‌ ಗ್ರಾಮ ಪಂಚಾಯಿತಿ: ವೀಣಾ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 15:38 IST
Last Updated 4 ಜುಲೈ 2025, 15:38 IST
ಹುಣಸೂರು ತಾಲ್ಲೂಕಿನ ಉದ್ದೂರು ಕಾವಲ್‌ ಗ್ರಾಮ ಪಂಚಾಯಿತಿಗೆ ಶುಕ್ರವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ವೀಣಾ ದೇವರಾಜ್‌ ಆಯ್ಕೆಗೊಂಡರು. ಹುಡಾ ಅಧ್ಯಕ್ಷ ಅಮರನಾಥ್‌, ಅಜ್ಗರ್‌ ಪಾಶಾ, ಮತ್ತು ಸದಸ್ಯರಿದ್ದಾರೆ.
ಹುಣಸೂರು ತಾಲ್ಲೂಕಿನ ಉದ್ದೂರು ಕಾವಲ್‌ ಗ್ರಾಮ ಪಂಚಾಯಿತಿಗೆ ಶುಕ್ರವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ವೀಣಾ ದೇವರಾಜ್‌ ಆಯ್ಕೆಗೊಂಡರು. ಹುಡಾ ಅಧ್ಯಕ್ಷ ಅಮರನಾಥ್‌, ಅಜ್ಗರ್‌ ಪಾಶಾ, ಮತ್ತು ಸದಸ್ಯರಿದ್ದಾರೆ.   

ಹುಣಸೂರು: ತಾಲ್ಲೂಕಿನ ಉದ್ದೂರು ಕಾವಲ್‌ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಹೊನ್ನಿಕುಪ್ಪೆ ಗ್ರಾಮದ ಸದಸ್ಯೆ ವೀಣಾ ದೇವರಾಜ್‌ ಅವಿರೋಧವಾಗಿ ಆಯ್ಕೆಗೊಂಡರು.

ಅಧ್ಯಕ್ಷರಾಗಿದ್ದ ಪದ್ಮಮ್ಮ ನೀಡಿದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ವೀಣಾ ದೇವರಾಜ್‌ ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿ ಹರೀಶ್‌ ತಿಳಿಸಿದರು. ಚುನಾವಣೆಯಲ್ಲಿ ಉಪಾಧ್ಯಕ್ಷೆ ಶಾಮತಿ, ಸದಸ್ಯರಾದ ಮನುಕುಮಾರ್‌, ಶೋಭ, ಪದ್ಮಮ್ಮ, ವೀರಭದ್ರಸ್ವಾಮಿ, ನಂದೀಶ್‌,ವಿಜಯಕುಮಾರ್.‌ ಗೋವಿಂದಶೆಟ್ಟಿ, ಗೌರಮ್ಮ, ಅಲ್ತಾಫ್‌ ಷರೀಫ್‌, ಮುಭಾರಕ್‌ ಬಾನು, ರತ್ನಮ್ಮ, ಪವಿತ್ರ, ರಾಮಬೋವಿ ಭಾಗವಹಿಸಿದ್ದರು.

 ಹುಣಸೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಮರನಾಥ್‌, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಅಜ್ಗರ್‌ ಪಾಷಾ  ಅಭಿನಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.