ಮೈಸೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಜೆಎಸ್‌ಎಸ್–ಎಸ್‌ಟಿಯು ಸಹಯೋಗದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ‘ಯುಜಿಸಿಇಟಿ–2025 ಕೌನ್ಸೆಲಿಂಗ್’ ಕುರಿತು ಮಾಹಿತಿ–ಮಾರ್ಗದರ್ಶನ ನೀಡಲು ‘ಮಂಥನ’ ಕಾರ್ಯಕ್ರಮವನ್ನು ಎಸ್‌ಜೆಸಿಇ ಕ್ಯಾಂಪಸ್‌ನ ಸುವರ್ಣ ಭವನದಲ್ಲಿ ಜೂನ್ 28ರಂದು ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದ್ದು, ಪ್ರಸಕ್ತ ಸಾಲಿನಲ್ಲಿ ಸಿಇಟಿಗೆ ಅರ್ಜಿ ಸಲ್ಲಿಸಿರುವ ಯುಜಿಸಿಇಟಿ ವಿದ್ಯಾರ್ಥಿಗಳು ಪೋಷಕರೊಂದಿಗೆ ಪಾಲ್ಗೊಂಡು ‘ಸೀಟು ಹಂಚಿಕೆ ಮಾರ್ಗದರ್ಶನ’ ಪಡೆಯಬಹುದು. ಉನ್ನತ ಶಿಕ್ಷಣ ಸಚಿವರು, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಆನ್‌ಲೈನ್‌ನಲ್ಲಿ ಮಾರ್ಗದರ್ಶನ ನೀಡುವರು. ಹೆಚ್ಚಿನ ಮಾಹಿತಿಗೆ ಮೊ.ಸಂ. 81059 51820 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.