ADVERTISEMENT

ಮೈಸೂರು ವಿ.ವಿ ವೆಬ್‌ಸೈಟ್ ಹ್ಯಾಕ್‌?

​ಪ್ರಜಾವಾಣಿ ವಾರ್ತೆ
Published 15 ಮೇ 2019, 4:09 IST
Last Updated 15 ಮೇ 2019, 4:09 IST
   

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ದೂರಶಿಕ್ಷಣ ವೆಬ್‌ಸೈಟ್‌ ಕೆಲಕಾಲ ‘ಹ್ಯಾಕ್‌’ ಆಗಿದ್ದು, ಮುಜುಗರಕ್ಕೆ ಈಡು ಮಾಡಿದೆ.

ವಿ.ವಿ.ಯ dde.uni-mysore.ac.in ವೆಬ್‌ಸೈಟ್ ಮಧ್ಯಾಹ್ನ 2ರ ವೇಳೆಗೆ ಹ್ಯಾಕ್‌ ಆಗಿತ್ತು. ವೆಬ್‌ಸೈಟ್ ತೆರೆದ ಕೂಡಲೇ ‘ಹ್ಯಾಕ್ಡ್‌ ಬೈ ಕ್ರ್ಯಾಷ್‌ ರೂಲರ್ಸ್‌‘, ‘ಪಾಕಿಸ್ತಾನ್‌ ಜಿಂದಾಬಾದ್’ ಎಂಬ ಸಂದೇಶ ಬರುತ್ತಿತ್ತು. ಇದರಿಂದ ಕೂಡಲೇ ಎಚ್ಚೆತ್ತುಕೊಂಡ ಮೈಸೂರು ವಿ.ವಿ ಕಂಪ್ಯೂಟರ್ ವಿಜ್ಞಾನ ವಿಭಾಗದ ಸಿಬ್ಬಂದಿ, ವೆಬ್‌ಸೈಟ್‌ ಅನ್ನು ಕೆಲಕಾಲ ಸ್ಥಗಿತಗೊಳಿಸಿ, ನಿರ್ವಹಣಾ ಕಾರ್ಯ ನಡೆಸಿದರು.

‘ವೆಬ್‌ಸೈಟ್‌ ಅನ್ನು ಕೂಡಲೇ ‘ಡೌನ್‌’ ಮಾಡಲಾಯಿತು. ಶೀಘ್ರವೇ ವೆಬ್‌ಸೈಟ್ ಅನ್ನು ಸರಿಪಡಿಸಲಾಗುವುದು’ ಎಂದು ಕುಲಪತಿಗಳ ವಿಶೇಷಾಧಿಕಾರಿ ಹಾಗೂ ಕಂಪ್ಯೂಟರ್‌ ತಜ್ಞ ಡಾ.ಎಚ್‌.ಕೆ.ಚೇತನ್ ತಿಳಿಸಿದರು.

ADVERTISEMENT

‘ವಿ.ವಿ.ಯ ಮುಖ್ಯ ವೆಬ್‌ಸೈಟ್‌ಗೆ ಯಾವುದೇ ಸಮಸ್ಯೆಯಾಗಿಲ್ಲ. ಏಕೆಂದರೆ, ಅದಕ್ಕೆ ‘ಬರಾಕುಡಾ’ (Barracuda) ‘ಫೈರ್‌ ವಾಲ್‌’ (ರಕ್ಷಣಾ ವ್ಯವಸ್ಥೆ) ಅಳವಡಿಸಲಾಗಿದೆ. ಹಾಗಾಗಿ, ಹ್ಯಾಕ್‌ ಮಾಡುವುದು ಸುಲಭವಲ್ಲ. ದೂರಶಿಕ್ಷಣಕ್ಕೆಂದು ತೆರೆದಿದ್ದ ಹೊಸ ವೆಬ್‌ಸೈಟ್‌ ಹ್ಯಾಕ್‌ ಮಾಡುವ ಪ್ರಯತ್ನ ನಡೆದಿದೆ’ ಎಂದು ಮಾಹಿತಿ ನೀಡಿದರು.

ಈ ಹಿಂದೆ ಒಮ್ಮೆ ಮೈಸೂರು ವಿಶ್ವವಿದ್ಯಾಲಯದ www.uni-mysore.ac.in ವೆಬ್‌ಸೈಟ್ ಹ್ಯಾಕ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.