ADVERTISEMENT

ಬನ್ನೂರು: ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ವೈಭವ್‌

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 4:41 IST
Last Updated 7 ಫೆಬ್ರುವರಿ 2022, 4:41 IST
ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಿಟ್ಟಿಸಿದ ವೈಭವ್‌. ತಂದೆ–ತಾಯಿ ಗಿರೀಶ್‌ ಹಾಗೂ ಗಗನ ಇದ್ದಾರೆ
ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಿಟ್ಟಿಸಿದ ವೈಭವ್‌. ತಂದೆ–ತಾಯಿ ಗಿರೀಶ್‌ ಹಾಗೂ ಗಗನ ಇದ್ದಾರೆ   

ಬನ್ನೂರು: ಪಟ್ಟಣದ ನಿವಾಸಿ ಗಿರೀಶ್‌ ಹಾಗೂ ಗಗನ ದಂಪತಿ ಪುತ್ರ ವೈಭವ್‌ (2) ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಆಯ್ಕೆಯಾಗಿದ್ದಾನೆ.

ಈ ಪೋರ ವಿವಿಧ ಪ್ರಾಣಿ, ಪಕ್ಷಿ, ಹಣ್ಣು, ವಸ್ತುಗಳು, ವಾಹನಗಳು ಹಾಗೂ ದೇಹದ ವಿವಿಧ ಭಾಗಗಳನ್ನು ಗುರುತಿಸುತ್ತಾನೆ. ವರ್ಣಮಾಲೆ ಹಾಗೂ ವಿವಿಧ ಯೋಗದ ಭಂಗಿಗಳನ್ನೂ ಗುರುತಿಸುತ್ತಾನೆ. ಬಾಲಕನ ಸ್ಮರಣಶಕ್ತಿ ಹೆಚ್ಚಾಗಿದೆ.

ಈತನ ಪ್ರತಿಭೆಯನ್ನು ಕಂಡ ಪೋಷಕರು ವಿಡಿಯೊ ಮಾಡಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಸಲ್ಲಿಸಿದ್ದರು. ಈಗ ರೆಕಾರ್ಡ್ಸ್‌ನಲ್ಲಿ ಸ್ಥಾನ ದಕ್ಕಿದ್ದು, ಪ್ರಮಾಣಪತ್ರವನ್ನು ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.