ADVERTISEMENT

ಉಚಿತವಾಗಿ ತರಕಾರಿ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 16:46 IST
Last Updated 30 ಮಾರ್ಚ್ 2020, 16:46 IST
ದಲ್ಲಾಳರ ಸಂಘದ ವತಿಯಿಂದ ತರಕಾರಿ ಖರೀದಿಸಿ ಸೋಮವಾರ ಉಚಿತವಾಗಿ ಹಂಚಲಾಯಿತು
ದಲ್ಲಾಳರ ಸಂಘದ ವತಿಯಿಂದ ತರಕಾರಿ ಖರೀದಿಸಿ ಸೋಮವಾರ ಉಚಿತವಾಗಿ ಹಂಚಲಾಯಿತು   

ಮೈಸೂರು: ಖರೀದಿದಾರರಿಲ್ಲದೇ ಪರಿತಪಿಸುತ್ತಿದ್ದ ರೈತರ ತರಕಾರಿಗಳನ್ನು ದಲ್ಲಾಳರ ಸಂಘದ ವತಿಯಿಂದ ಖರೀದಿಸಿ ಸೋಮವಾರ ನಗರದ ಕೊಳೆಗೇರಿ ಹಾಗೂ ಕಡಿಮೆ ಆದಾಯ ಹೊಂದಿರುವ ಜನರು ವಾಸಿಸುವ ಬಡಾವಣೆಗಳ ಜನರಿಗೆ ಉಚಿತವಾಗಿ ಹಂಚಲಾಯಿತು.

‘ಸುಮಾರು 10 ಸರಕುಸಾಗಣೆ ವಾಹನಗಳಲ್ಲಿದ್ದ 11 ಟನ್‌ನಷ್ಟು ವಿವಿಧ ತರಕಾರಿಗಳನ್ನು ಬಡವರಿಗೆ ಉಚಿತವಾಗಿ ನೀಡಲಾಗಿದೆ. ನಂಜನಗೂಡಿನಲ್ಲಿ ಅತಿ ಹೆಚ್ಚು ‘ಕೋವಿಡ್– 19’ ಪ್ರಕರಣಗಳು ಕಂಡು ಬಂದಿದ್ದರಿಂದ ಕೇರಳದ ವರ್ತಕರು ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ, ರೈತರ ತರಕಾರಿಗಳು ಕೊಳೆಯುವುದು ಬೇಡ ಎಂದು ಅವರಿಂದ ರಿಯಾಯಿತಿ ದರದಲ್ಲಿ ಖರೀದಿಸಿ ಅಗತ್ಯವುಳ್ಳವರಿಗೆ ಹಂಚಲಾಯಿತು’ ಎಂದು ಎಪಿಎಂಸಿ ಉಪಾಧ್ಯಕ್ಷ ಜವರಪ್ಪ ‘ಪ‍್ರಜಾವಾಣಿ’ಗೆ ತಿಳಿಸಿದರು.

ಮಂಗಳವಾರ ಎಪಿಎಂಸಿ ವತಿಯಿಂದಲೇ ಖರೀದಿಸಿ ಹಂಚಲಾಗುವುದು. ಈ ರೀತಿ ಖರೀದಿಸಲು ವಿವಿಧ ಸಂಘ, ಸಂಸ್ಥೆಗಳನ್ನು ಆಹ್ವಾನಿಸಲಾಗಿದೆ. ಇದರಿಂದ ರೈತರಿಗೆ ತೀರಾ ನಷ್ಟವಾಗುವುದಿಲ್ಲ. ಬಡವರಿಗೂ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ರಕ್ಷಿತ್, ‘ತರಕಾರಿಗಳು ಕೊಳೆಯುವುದು ಬೇಡ ಹಾಗೂ ಮಾರುಕಟ್ಟೆ ನಿಲ್ಲಬಾರದು ಎಂಬ ಉದ್ದೇಶದಿಂದ ದಲ್ಲಾಳರ ಸಂಘದ ಸದಸ್ಯರ ಮನವೊಲಿಸಿ ಸೋಮವಾರ ತರಕಾರಿಗಳನ್ನು ಖರೀದಿಸಿ ಉಚಿತವಾಗಿ ಹಂಚಲಾಗಿದೆ. ಮಂಗಳವಾರ ಎಪಿಎಂಸಿಯಿಂದಲೇ ಖರೀದಿಸಲಾಗುತ್ತದೆ. ಯಾವುದೇ ಕಾರಣಕ್ಕೆ ತರಕಾರಿ ಮಾರುಕಟ್ಟೆಯನ್ನು ಮುಚ್ಚುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.