ADVERTISEMENT

ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ

ನಗರದ ಹೊರವಲಯದಲ್ಲಿ ಮತ್ತೆ ತಲೆ ಎತ್ತಿದ ಪುಂಡರು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 10:34 IST
Last Updated 16 ಆಗಸ್ಟ್ 2019, 10:34 IST

ಮೈಸೂರು: ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ನಡೆಸುತ್ತಿರುವ ದಾಳಿಯನ್ನು ನಗರ ಅಪರಾಧ ಪತ್ತೆ ವಿಭಾಗದ (ಸಿಸಿಬಿ) ಪೊಲೀಸರು ಮುಂದುವರಿಸಿದ್ದಾರೆ.

ಇಲ್ಲಿನ ಹೆಬ್ಬಾಳ 1ನೇ ಹಂತದ 3ನೇ ಕ್ರಾಸ್‌ನಲ್ಲಿನ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಒಬ್ಬ ಯುವತಿಯನ್ನು ರಕ್ಷಿಸಿದ್ದಾರೆ.

ವೇಶ್ಯಾವಾಟಿಕೆ ನಡೆಸುತ್ತಿದ್ದ ಶೀಲಾ (40) ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಧು ಬಂಧಿತರು.
ವೇಶ್ಯಾವಾಟಿಕೆಗೆ ಬಳಸಲಾಗಿದ್ದ 01 ಮೊಬೈಲ್ ಫೋನ್ ಮತ್ತು ₹ 3,700 ನಗದನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ಸಿಸಿಬಿ ಇನ್‌ಸ್ಪೆಕ್ಟರ್ ಎ.ಮಲ್ಲೇಶ್, ಹೆಬ್ಬಾಳ್ ಠಾಣೆಯ ಇನ್‌ಸ್ಪೆಕ್ಟರ್ ಎ.ಗುರುಪ್ರಸಾದ್, ಎಎಸ್‍ಐ ರಾಜು ಸಿಬ್ಬಂದಿಯವರಾದ ಜೋಸೆಫ್ ನರೋನ, ಶ್ರೀನಿವಾಸ್ ಪ್ರಸಾದ್, ದೀಪಕ್, ರಘು, ರಾಜಶ್ರೀ, ಮೋಹನ್ ಕುಮಾರ್, ಶ್ರೀನಿವಾಸ ಕಾರ್ಯಾಚರಣೆ ತಂಡದಲ್ಲಿದ್ದರು.

ಮತ್ತೆ ನಗರದ ಹೊರವಲಯದಲ್ಲಿ ಪುಂಡರ ಹಾವಳಿ‌

ಮೈಸೂರು: ಹಲವು ದಿನಗಳಿಂದ ತಹಬದಿಗೆ ಬಂದಿದ್ದ ಪುಂಡರ ಹಾವಳಿ ನಗರದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಈ ಬಾರಿ ಪುಂಡರು ವ್ಯಕ್ತಿಯೊಬ್ಬರಿಂದ ಬೈಕ್, ಹಣ ಮತ್ತು ಮೊಬೈಲ್ ಕಿತ್ತುಕೊಂಡು ಹೋಗಿದ್ದಾರೆ.

ಆರ್.ಟಿ.ನಗರದ ಬಳಿ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದ ಮೂಗನಹುಂಡಿ ಗ್ರಾಮದ ವಾಸಿ ಮಹದೇವು ಅವರನ್ನು 3ರಿಂದ 4 ಮಂದಿ ಇದ್ದ ಪುಂಡರ ತಂಡ ತಡೆದು ಅವರ ಬೈಕ್, ಮೊಬೈಲ್ ಹಾಗೂ ₹ 10 ಸಾವಿರ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.