ADVERTISEMENT

ವಿಶ್ವಕರ್ಮ ಬ್ರಿಗೇಡ್: ದಾಸಾಚಾರಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 26 ಮೇ 2025, 16:08 IST
Last Updated 26 ಮೇ 2025, 16:08 IST
ಬಿ.ಡಿ.ದಾಸಾಚಾರಿ
ಬಿ.ಡಿ.ದಾಸಾಚಾರಿ   

ಪ್ರಜಾವಾಣಿ ವಾರ್ತೆ

ಸರಗೂರು: ಸರಗೂರು ಮತ್ತು ಎಚ್.ಡಿ.ಕೋಟೆ ತಾಲ್ಲೂಕು ವಿಶ್ವಕರ್ಮ ಬ್ರಿಗೇಡ್ ಅಧ್ಯಕ್ಷರಾಗಿ ಬಿ.ಡಿ.ದಾಸಾಚಾರಿ ಅವಿರೋಧವಾಗಿ ಆಯ್ಕೆಯಾದರು.

ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ವಿಶ್ವಕರ್ಮ ಯುವ ಬ್ರಿಗೇಡ್ ಅಧ್ಯಕ್ಷ ಎಚ್.ಬಿ.ನಿಂಗರಾಜ್ ಅಧ್ಯಕ್ಷತೆಯಲ್ಲಿ ಅವಿರೋಧವಾಗಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ADVERTISEMENT

ಎಚ್.ಬಿ.ನಿಂಗರಾಜು ಮಾತನಾಡಿ, ಸಂಸ್ಥೆಯು ಪ್ರತಿ ವರ್ಷ ತಾಲ್ಲೂಕಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಧನಸಹಾಯ ಹಾಗೂ ಪ್ರತಿಭಾ ಪುರಸ್ಕಾರ ಮಾಡುವುದರ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಮೂರನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಹಾಜರಿದ್ದು 2025- 26ನೇ ವರ್ಷಕ್ಕೆ ಬಿ.ಡಿ.ದಾಸಾಚಾರಿ ಅವರನ್ನು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.

ಕಾರ್ಯಕಾರಿ ಮಂಡಳಿಯ ಕಾರ್ಯದರ್ಶಿಯಾಗಿ ಸ್ಕಂದ ಕಂಪ್ಯೂಟರ್ ಮಾಲೀಕರಾದ ಎಚ್.ಬಿ.ನಿಂಗರಾಜ್ ಆಚಾರ್, ಖಜಾಂಚಿಯಾಗಿ ವಿ.ಪಿ ಕನ್‌ಸ್ಟ್ರಕ್ಷನ್ ಮಾಲೀಕ ವಸಂತ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.

ಮಾಜಿ ಅಧ್ಯಕ್ಷರಾದ ಕಿರಣ್, ಖಜಾಂಚಿ ಲೋಕೇಶ್, ವಸಂತ್ ಕುಮಾರ್, ನಿರ್ದೇಶಕ ವಿಜಯ್ ಕುಮಾರ್, ನಾಗೇಶ್ ಆಚಾರ್, ಸಿದ್ದಪ್ಪಾಜಿ, ಪ್ರದೀಪ್ ಕುಮಾರ್, ಸಾ.ನಾ.ಗೋವಿಂದರಾಜು, ರವಿಕುಮಾರ್, ನಾಗೇಂದ್ರ ಆಚಾರ್, ರಾಜಾಚಾರಿ, ಚಂದನ್, ಬಿ.ಟಿ.ಜನಾರ್ಧನ್, ವೆಂಕಟೇಶ್, ಶೇಖರ್, ವಿನೋದ್ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.