ADVERTISEMENT

ಸಾಧಕರಿಗೆ ವಿಶ್ವಮಾನವ ಕುವೆಂಪು ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 10:52 IST
Last Updated 25 ಜನವರಿ 2023, 10:52 IST
ಕನ್ನಡ ಸಾಹಿತ್ಯ ಪರಿಷತ್ ಮೈಸೂರು ತಾಲ್ಲೂಕು ಘಟಕದಿಂದ ಸಾಧಕರಿಗೆ ವಿಶ್ವಮಾನವ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಯಿತು
ಕನ್ನಡ ಸಾಹಿತ್ಯ ಪರಿಷತ್ ಮೈಸೂರು ತಾಲ್ಲೂಕು ಘಟಕದಿಂದ ಸಾಧಕರಿಗೆ ವಿಶ್ವಮಾನವ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಯಿತು   

ಮೈಸೂರು: ಕನ್ನಡ ಸಾಹಿತ್ಯ ಪರಿಷತ್ ಮೈಸೂರು ತಾಲ್ಲೂಕು ಘಟಕದಿಂದ ವಿಜಯನಗರದ ಕನ್ನಡ ಭವನದಲ್ಲಿ 14 ಸಾಧಕರಿಗೆ ವಿಶ್ವಮಾನವ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಯಿತು. ಪದಾಧಿಕಾರಿಗಳ ಪದಗ್ರಹಣ ಹಾಗೂ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮವೂ ನಡೆಯಿತು.

ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಗಂಗಾಧರ, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ತಾಲ್ಲೂಕು ಘಟಕದ ಅಧಕ್ಷ ತಿ.ನರಸೀಪುರದ ಕನ್ನಡ ಪುಟ್ಟಸ್ವಾಮಿ, ಹುಣಸೂರಿನ ಎಚ್.ಕೆ.ಮಹದೇವ್, ಮೈಸೂರು ನಗರ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು, ಎಚ್.ಡಿ. ಕೋಟೆಯ ಕನ್ನಡ ಪ್ರಮೋದ, ನಂಜನಗೂಡಿನ ಲತಾ ಮುದ್ದುಮೋಹನ್, ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ, ನಗರಪಾಲಿಕೆ ಸದಸ್ಯೆ ಶೋಭಾ, ಜಿಲ್ಲಾ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ರುಕ್ಮಾಂಗದ, ಪಿಡಿಒ ನರಹರಿ, ಶಿಕ್ಷಕಿ ಸಾಧನಾ ರಾಮಪ್ರಸಾದ್, ವಿಜಯಪುರದ ಸುಜ್ಞಾನ ವಿದ್ಯಾಪೀಠದ ಕಾರ್ಯದರ್ಶಿ ತಮ್ರಳ್ಳಿ ನಾಗರಾಜ್, ಬೆಳಗಾವಿ ಜಿಲ್ಲೆ ನೇಸರಗಿಯ ಪತ್ರಕರ್ತ ಚನ್ನಮಲ್ಲಪ್ಪ ಮೆಣಸಿನಕಾಯಿ ಪ್ರಶಸ್ತಿ ಸ್ವೀಕರಿಸಿದರು.

ವಿಷ್ಣುವರ್ಧನ್ ಮೆಲೋಡಿಸ್‌ನ ಚಂದನ ಶ್ರೀನಿವಾಸ್ ಮತ್ತು ತಂಡದವರು ಕನ್ನಡ ಗೀತಗಾಯನ ನಡೆಸಿಕೊಟ್ಟರು.

ADVERTISEMENT

ನಂತರ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ನಡೆಯಿತು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು. ಮೈಸೂರು ತಾ.ಪಂ. ಇಒ ಎಚ್.ಡಿ. ಗಿರೀಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಂ.ವಿ. ಶಿವಶಂಕರಮೂರ್ತಿ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿದ್ದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಕೋಶಾಧ್ಯಕ್ಷ ಎಚ್.ಗಿರೀಶ್, ಉಪಾಧ್ಯಕ್ಷ ಸಾಲುಂಡಿ ಎಸ್. ದೊರೆಸ್ವಾಮಿ, ಗೌರವ ಕಾರ್ಯದರ್ಶಿ ಎಸ್.ದೊರೆಸ್ವಾಮಿ, ಎನ್.ಕೆ. ಗಣೇಶ್, ಕಾನೂನು ಘಟಕದ ಅಧ್ಯಕ್ಷ ಎನ್. ಲೋಹಿತ್, ಸಂಘಟನಾ ಕಾರ್ಯದರ್ಶಿ ಹರದೂರು ಜವರೇಗೌಡ, ಸಹ ಕಾರ್ಯದರ್ಶಿ ಎಚ್.ಸುಶೀಲಾ, ಮಾಧ್ಯಮ ಸಲಹೆಗಾರ ಜೆ.ಮಹದೇವ, ಗೌರವ ಸಲಹೆಗಾರರಾದ ಅಮೀನಾ ಕಾಲೇಖಾನ್, ಹೊನ್ನಶೆಟ್ಟಿ, ಎನ್.ಸಿ. ಉಮೇಶ್, ನಾಗರಾಜು, ಸಂಚಾಲಕರಾದ ಹ.ನಾ. ರಾಮಕೃಷ್ಣ, ಆಲನಹಳ್ಳಿ ಮನು, ಸಹ ಕಾರ್ಯದರ್ಶಿಗಳಾದ ಎಚ್.ಪಿ.ಲೋಕೇಶ್, ಬಸವರಾಜು, ರವಿಕುಮಾರ್, ಸಂಘ ಸಂಸ್ಥೆಗಳ ಪ್ರತಿನಿಧಿ ಸುವರ್ಣಾ, ನಿರ್ದೇಶಕರಾದ ಎಂ.ನಿಂಗರಾಜು, ಕರೀಗೌಡ, ಕುಳ್ಳೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.