ADVERTISEMENT

ಹುಣಸೂರು: ವನ್ಯಪ್ರಾಣಿ ಬೇಟೆಗೆ ಯತ್ನ; ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 5:49 IST
Last Updated 18 ನವೆಂಬರ್ 2025, 5:49 IST
ನಾಗರಹೊಳೆ ಅರಣ್ಯ ಆನೆಚೌಕೂರು ವಲಯದ ಅರಣ್ಯದಲ್ಲಿ ವನ್ಯಪ್ರಾಣಿ ಭೇಟೆಗೆ ಯತ್ನಿಸಿದ ಆರೋಪ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿರುವ ಆರೋಪಿಗಳು
ನಾಗರಹೊಳೆ ಅರಣ್ಯ ಆನೆಚೌಕೂರು ವಲಯದ ಅರಣ್ಯದಲ್ಲಿ ವನ್ಯಪ್ರಾಣಿ ಭೇಟೆಗೆ ಯತ್ನಿಸಿದ ಆರೋಪ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿರುವ ಆರೋಪಿಗಳು   

ಹುಣಸೂರು: ನಾಗರಹೊಳೆ ಅರಣ್ಯದ ಆನೆಚೌಕೂರು ವಲಯದ ಪ್ರಭನಹಳ್ಳ ಎಂಬಲ್ಲಿ ಅಕ್ರಮ ಬೇಟೆಗೆ ಹೊಂಚು ಹಾಕಿದ್ದ ನಾಲ್ವರಲ್ಲಿ ಇಬ್ಬರನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದೆ ಎಂದು ಎಸಿಎಫ್‌ ಲಕ್ಷ್ಮಿಕಾಂತ್‌ ತಿಳಿಸಿದ್ದಾರೆ. ಅಭಿಲಾಷ್‌ ಮತ್ತು ಕಿರಣ್‌ ಬಂಧಿತರು

ಘಟನೆ ವಿವರ: ನಾಗರಹೊಳೆ ಅರಣ್ಯ ಆನೆಚೌಕೂರು ವಲಯದ ಪ್ರಭನಹಳ್ಳ ಎಂಬಲ್ಲಿ ನಾಲ್ವರು ಆರೋಪಿಗಳು ಮಾರಕಾಸ್ರ್ರ ಮತ್ತು ಬಂದೂಕಿನೊಂದಿಗೆ ಅಕ್ರಮವಾಗಿ ಅರಣ್ಯ ಪ್ರವೇಶಿಸಿ ವನ್ಯಪ್ರಾಣಿ ಭೇಟೆಯಾಡಲು ಹೊಂಚು ಹಾಕಿದ್ದರು. ಈ ಭಾಗದಲ್ಲಿ ಗಸ್ತು ತಿರುಗುತ್ತಿದ್ದ ಇಲಾಖೆ ಸಿಬ್ಬಂದಿಗೆ ಸಿಕ್ಕ ಸುಳಿವಿನ ಮೇಲೆ ಕಾರ್ಯೋನ್ಮೂಖರಾಗಿ ಕಾರ್ಯಾಚರಣೆ ನಡೆಸಿ ನಾಲ್ವರಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರಿಂದ ಮಾರಕಾಸ್ತ್ರ ಮತ್ತು ಬಂದೂಕು, ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಪಿಗಳಾದ ಸ್ವಾಮಿ, ಶ್ರೇಯಸ್‌ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ದೇವರಾಜ್‌, ರಾಮಣ್ಣ, ಮೋಜಣಿದಾರ ಅನಿಲ್‌, ಗಸ್ತುಪಾಲಕರಾದ ಪ್ರದೀಪ್‌ ದಳವಾಹಿ, ಅಕ್ಷಯ್‌, ಮಧು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.