ADVERTISEMENT

ಬದ್ಧತೆಯಿಂದ ವೃತ್ತಿ ಜೀವನದಲ್ಲಿ ಯಶಸ್ಸು: ಡಾ. ಎಂ.ವಿ. ಸುನಿಲ್‌

​ಪ್ರಜಾವಾಣಿ ವಾರ್ತೆ
Published 14 ಮೇ 2025, 13:58 IST
Last Updated 14 ಮೇ 2025, 13:58 IST
ಎಂಐಟಿ ಕಾಲೇಜಿನಲ್ಲಿ ನಡೆದ ಕಾರ್ಯಾಗಾರದ ಉದ್ಘಾಟನೆಯಲ್ಲಿ ಎಂ.ವಿ. ಸುನಿಲ್‌, ಎಂ. ಚಂದ್ರಜಿತ್‌, ಎಸ್‌.ಪಿ. ಸುನಿತಾ, ಜಿ.ಎಸ್. ಮಹದೇವಸ್ವಾಮಿ ಪಾಲ್ಗೊಂಡರು
ಎಂಐಟಿ ಕಾಲೇಜಿನಲ್ಲಿ ನಡೆದ ಕಾರ್ಯಾಗಾರದ ಉದ್ಘಾಟನೆಯಲ್ಲಿ ಎಂ.ವಿ. ಸುನಿಲ್‌, ಎಂ. ಚಂದ್ರಜಿತ್‌, ಎಸ್‌.ಪಿ. ಸುನಿತಾ, ಜಿ.ಎಸ್. ಮಹದೇವಸ್ವಾಮಿ ಪಾಲ್ಗೊಂಡರು   

ಮೈಸೂರು: ‘ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ಆತ್ಮವಿಶ್ವಾಸ, ಬದ್ಧತೆ ಮುಖ್ಯ’ ಎಂದು ಎಸ್‌ಡಿಎಂ ಐಎಂಡಿ ಕಾಲೇಜಿನ ಡಾ. ಎಂ.ವಿ. ಸುನಿಲ್‌ ಹೇಳಿದರು.

ಎಂಐಟಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ವಿಭಾಗವು ಗ್ರಂಥಪಾಲಕರ ಸಬಲೀಕರಣ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬದಲಾದ ತಂತ್ರಜ್ಞಾನಕ್ಕೆ ತಕ್ಕಂತೆ ಕೌಶಲ ವೃದ್ಧಿಸಿಕೊಂಡು ಅಧ್ಯಯನಶೀಲರಾಗುವಂತೆ ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಎಂ. ಚಂದ್ರಜಿತ್‌, ಐಕ್ಯೂಎಸ್‌ಸಿ ಸಂಚಾಲಕಿ ಎಸ್‌.ಪಿ. ಸುನಿತಾ, ಗ್ರಂಥಪಾಲಕ ಜಿ.ಎಸ್. ಮಹದೇವಸ್ವಾಮಿ ಇದ್ದರು. ಆಧುನಿಕ ತಂತ್ರಜ್ಞಾನ ಹಾಗೂ ಎ.ಐ. ಅಳವಡಿಕೆಯಿಂದ ಗ್ರಂಥಪಾಲಕರ ಸಬಲೀಕರಣ ಕುರಿತು ನಾಲ್ಕು ಗೋಷ್ಠಿಗಳು ನಡೆದವು. ಎಂ.ವಿ. ಸುನಿಲ್‌, ಹುಲ್ಲಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗ್ರಂಥಪಾಲಕ ಜಯಕುಮಾರ್ಗ, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಮುಖ್ಯ ಗ್ರಂಥನಿರ್ವಾಹಕ ಬಿ. ಶೈಲೇಂದ್ರ ಕುಮಾರ್ ಹಾಗೂ ಎಂಐಟಿ ಕಾಲೇಜಿನ ಸುನಿತಾ ವಿಚಾರ ಮಂಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.