ADVERTISEMENT

ಅಧಿಕಾರ ಬಿಡುವಂತೆ ಹೇಳಿಲ್ಲವೆಂದು ತಂದೆ ತಿಳಿಸಿದ್ದಾರೆ: ಯತೀಂದ್ರ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 11:00 IST
Last Updated 16 ಅಕ್ಟೋಬರ್ 2025, 11:00 IST
ಯತೀಂದ್ರ ಸಿದ್ದರಾಮಯ್ಯ
ಯತೀಂದ್ರ ಸಿದ್ದರಾಮಯ್ಯ   

ಮೈಸೂರು: ‘ಹೈಕಮಾಂಡ್ ಆಗಲಿ ಅಥವಾ ಬೇರೆ ನಾಯಕರಾಗಲಿ ನವೆಂಬರ್ ಆದ ಮೇಲೆ ಅಧಿಕಾರ ಬಿಡಿ ಎಂದು ಹೇಳಿಲ್ಲ ಎಂದು ನಮ್ಮ ತಂದೆಯವರು ಹೇಳಿದ್ದಾರೆ’ ಎಂದು ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು 5 ವರ್ಷಗಳವರೆಗೂ ಮುಖ್ಯಮಂತ್ರಿ ಆಗಿರಬೇಕು. ಅದರಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಅವರೇ ಮುಂದುವರಿಯುತ್ತಾರೆ. ಹೀಗಾಗಿ, ಯಾವ ಕ್ರಾಂತಿಯೂ ಇಲ್ಲ. ಎಲ್ಲರೂ ಯಾವ ಕ್ರಾಂತಿ ಬಗ್ಗೆ ಮಾತನಾಡುತ್ತಿದ್ದಾರೆಯೋ ನನಗೆ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಈಗಿನ ಪರಿಸ್ಥಿತಿ ನೋಡಿದರೆ ತಂದೆ ಅಧಿಕಾರದ ಅವಧಿ ಪೂರ್ಣಗೊಳಿಸುತ್ತಾರೆ. ಅವರಿಗೆ ಶಾಸಕರ ಬೆಂಬಲವಿದೆ. ಇಲ್ಲದಿದ್ದರೆ ಅವರೆಲ್ಲರೂ ಸುಮ್ಮನೆ ಇರುತ್ತಿದ್ದರಾ, ಹೈಕಮಾಂಡ್‌ಗೆ ದೂರು ಕೊಡುತ್ತಿದ್ದರು’ ಎಂದರು.

‘ಡಿಸೆಂಬರ್‌ನಲ್ಲಿ ಸಂ‍ಪುಟ ಪುನರ್‌ರಚನೆ ಮಾಡುವುದಾಗಿ ತಂದೆ ಹೇಳಿದ್ದಾರೆ. ನಾನು ಮುಖ್ಯಮಂತ್ರಿ ಆಗಿರುವವರೆಗೆ ನಿನ್ನನ್ನು ಮಂತ್ರಿಯನ್ನಾಗಿ ಮಾಡುವುದಿಲ್ಲ ಎಂದೂ ಅವರು ಹೇಳಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.