ADVERTISEMENT

ಅಂಧ ಮಕ್ಕಳಿಗೆ ಸಮವಸ್ತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 6:34 IST
Last Updated 2 ಜನವರಿ 2014, 6:34 IST

ಮಾನ್ವಿ: ‘ಸೇವಾ ಮನೋಭಾವದ ಯುವಕರು ಸಂಘಟಿತರಾದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ’ ಎಂದು ಉಪನ್ಯಾಸಕ ರಮೇಶಬಾಬು ಯಾಳಗಿ ಹೇಳಿದರು.

ಬುಧವಾರ ಪಟ್ಟಣದ ಚನ್ನಬಸವೇ ಶ್ವರ ಅಂಧ ಮಕ್ಕಳ ವಸತಿಶಾಲೆಯಲ್ಲಿ ಗಜಕರ್ಣ ಯುವಕ ಸಂಘದ ವತಿಯಿಂದ ಹೊಸ ವರ್ಷಾಚರಣೆ ಅಂಗವಾಗಿ ನಡೆದ ಸಮವಸ್ತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಹೊಸ ವರ್ಷಾದ ನೆಪದಲ್ಲಿ ಹಣ ಪೋಲು ಮಾಡುವ ಇಂದಿನ ದಿನ ಗಳಲ್ಲಿ ಗಜಕರ್ಣ ಯುವಕ ಸಂಘ ಅಂಧ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸುತ್ತಿರುವು ಶ್ಲಾಘ ನೀಯ. ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ’ ಎನ್ನುವ ಮಾತು ಎಲ್ಲರೂ ಪಾಲಿಸಿದರೆ ಸಂಕಷ್ಟದಲ್ಲಿರುವವರನ್ನು ಪಾರಾಗುತ್ತಾರೆ  ಎಂದರು.

ಹೊಸ ವರ್ಷಾದ ಅಂಧ ಮಕ್ಕಳು ಕೇಕ್‌ ಕತ್ತರಿಸಿದರು. ನಂತರ ಎಲ್ಲ ಮಕ್ಕಳಿಗೆ ತಲಾ ಎರಡು ಜೊತೆ ಸಮವಸ್ತ್ರ ವಿತರಿಸಲಾಯಿತು. ಅಂಧರು ಗೀತೆಗಳನ್ನು ಹಾಡಿದರು

ಗಜಕರ್ಣ ಯುವಕ ಸಂಘದ ಪದಾಧಿಕಾರಿಗಳಾದ ಗಣೇಕಲ್‌ ರಾಜಶೇಖರಗೌಡ, ನಾಗರಾಜ ಆಲ್ದಾಳ, ಜಿ.ಸೋಮಶೇಖರ, ಗಣೇಕಲ್‌ ಶಿವರಾಜ, ಶಿವಕುಮಾರ ಕೋನಾಪುರಪೇಟೆ, ಎಸ್.ಕುಮಾರ, ಇಂದ್ರಜಿತ್‌ ನಾಯಕ, ಶೇಖರ್‌ ಪವಾರ, ಹರೀಶ್, ಗುರುಪ್ರಸಾದ, ಗೋಪಿ, ಅಮರೇಗೌಡ, ಶರೀಫ್‌, ಮಹಾಂತೇಶ, ಸುನೀಲ್‌, ಚಂದ್ರು ಎಡಿಬಿ, ಗಯಾಸ್‌, ಚೇತನ್‌ ಬಿ, ಚನ್ನಬಸವೇಶ್ವರ ಅಂಧ ಮಕ್ಕಳ ವಸತಿಶಾಲೆ ಸಂಚಾಲಕ ಬಸವಲಿಂಗ ಸ್ವಾಮಿ ಇತರರು ಇದ್ದರು. ಬಿ. ಬಸವರಾಜ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.