ADVERTISEMENT

ಅಸ್ಪೃಶ್ಯ ದಲಿತರಿಗೆ ಬೆಂಬಲ: ಪುರಸಭೆ ಸದಸ್ಯರ ಭೇಟಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 7:29 IST
Last Updated 8 ಮಾರ್ಚ್ 2018, 7:29 IST

ಲಿಂಗಸುಗೂರು: ‘ಮುಂಬರುವ ಲಿಂಗಸುಗೂರು ಮೀಸಲು ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ, ಮಾದಿಗ, ಚಲುವಾದಿ ಬೆಂಬಲಿತ ಅಸ್ಪೃಶ್ಯ ದಲಿತ ಆಕಾಂಕ್ಷಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೋರಿ ಬುಧವಾರ ಸರೋಜ ಪೋಳ, ಎಚ್‌.ಬಿ. ಮುರಾರಿ, ಪಾಮಯ್ಯ ಮುರಾರಿ ನೇತೃತ್ವದ ತಂಡ ಪುರಸಭೆ ಸದಸ್ಯರನ್ನು ಭೇಟಿ ಮಾಡಿತು.

ಎಚ್‌.ಬಿ. ಮುರಾರಿ, ಪಾಮಯ್ಯ ಮುರಾರಿ ಮಾತನಾಡಿ, ‘ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ. ಇತರೆ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವುದನ್ನು ವಿರೋಧಿಸುವುದಿಲ್ಲ. ಆದರೆ, ಸಂವಿಧಾನಬದ್ಧ ತಮ್ಮ ಹಕ್ಕನ್ನು ಹೈಕಮಾಂಡ್‌ಗೆ ಸಲ್ಲಿಸಿದ್ದೇವೆ. ಪುರಸಭೆ ಸದಸ್ಯರು ಕೂಡ ತಮ್ಮ ಹಕ್ಕನ್ನು ಬೆಂಬ ಲಿಸಿ ಸಹಕಾರ ನೀಡಬೇಕು’ ಎಂದರು.

ಸರೋಜ ಪೋಳ ಮಾತನಾಡಿ, ‘ರಾಜಕೀಯ ಕ್ಷೇತ್ರದಕ್ಕೆ ತಾವು ಹೊಸಬರು. ಆದರೆ, ಮೀಸಲಾತಿ ನಿಯಮಗಳಡಿ ಅಸ್ಪೃಶ್ಯರಿಗೆ ನ್ಯಾಯ ಒದಗಿಸುವ ಜೊತೆಗೆ ಹೈದರಬಾದ ಕರ್ನಾಟಕದಲ್ಲಿ ಮಹಿಳೆಯರಿಗೆ ಟಿಕೆಟ್‌ ಹಂಚಿಕೆ ಆಗುವಲ್ಲಿ ತಾರತಮ್ಯವಾಗಿದೆ. ಅಂತೆಯೇ ಹೈಕಮಾಂಡ್‌ ಈಗಿರುವ ತಮ್ಮ ಮೂವರಲ್ಲಿ ಯಾರಿಗೆ ಟಿಕೆಟ್‌ ನೀಡಿದರು ಒಗ್ಗಟ್ಟಾಗಿ ಶ್ರಮಿಸುತ್ತಿದ್ದು ತಮ್ಮ ಸಹಕಾರ ಬೇಕು’ ಎಂದು ಮನವಿ ಮಾಡಿದರು. ಜಿಲ್ಲಾ ಕಾಂಗ್ರೆಸ್‌ ವಕ್ತಾರ ಶರಣಪ್ಪ ಮೇಟಿ, ಪುರಸಭೆ ಸದಸ್ಯರಾದ ಕುಮಾರಸ್ವಾಮಿ ಸಾಲ್ಮನಿ, ಅನೀಸಪಾಷ, ಗುಂಡೆರಾವ್‌ ಕುಲಕರ್ಣಿ, ರವಿಕುಮಾರ ಚೌದ್ರಿ, ಶಿವರಾಯ ದೇಗುಲಮಡಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.