ಕವಿತಾಳ: ಪಟ್ಟಣಕ್ಕೆ ಶುದ್ದ ಕುಡಿಯುವ ನೀರು ಒದಗಿಸಲು ಸಮೀಪದ ಪರಸಾಪುರದ ಬಳಿ ನಿರ್ಮಿಸಲಾಗುತ್ತಿರುವ ಕೆರೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಶಾಸಕ ಜಿ.ಹಂಪಯ್ಯ ನಾಯಕ ಭೂಸೇನಾ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.
ಯೋಜನೆಯಲ್ಲಿರುವಂತೆ ಕಾಮಗಾರಿ ಕೈಗೊಳ್ಳಬೇಕು. ತಾಂತ್ರಿಕ ಕಾರಣಗಳಿಂದ ಕಾಮಗಾರಿ ಆರಂಭಿಸಲು ವಿಳಂಬವಾಗಿದೆ. ಹೀಗಾಗಿ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಮತ್ತು ನಿರಂತರವಾಗಿ ಕಾಮಗಾರಿ ನಡೆಯಬೇಕು ಎಂದು ಸೂಚಿಸಿದರು.
ಕೆರೆಯ ತಳ ಭಾಗಕ್ಕೆ ಕಾಂಕ್ರೀಟ್ ಹಾಕುವಂತೆ ತಾಲ್ಲೂಕು ಪಂಚಾಯಿತಿ ಸದಸ್ಯ ಕರಿಯಪ್ಪ ಅಡ್ಡೆ ಹೇಳಿದರು.
ಕಾಮಗಾರಿ ಬಗ್ಗೆ ಯಾರಾದರೂ ತಕರಾರು ಮಾಡಿದರೆ ತಮಗೆ ಮಾಹಿತಿ ನೀಡುವಂತೆ ಹನುಮಂತಪ್ಪ ತಿಳಿಸಿದರು.
ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದ ತಕ್ಷಣ ಯೋಜನಾಪಟ್ಟಿಯಂತೆ ಕೆಲಸ ನಿರ್ವಹಿಸಲಾಗುವುದು.
ನೀರು ಶುದ್ದೀಕರಣ ಘಟಕ, ರೈಸಿಂಗ್ ಮೇನ್ ಪೈಪ್‌ಲೈನ್ ಮತ್ತು ಜಾಕವೆಲ್ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗವುದು ಎಂದು ಭೂಸೇನಾ ನಿಗಮದ ಅಧಿಕಾರಿ ಅಬ್ದುಲ್ ರಷೀದ್ ಹೇಳಿದರು.
ಕಲ್ಮಠದ ಬಸವಲಿಂಗ ಸ್ವಾಮೀಜಿ, ಬಸ್ಸಪ್ಪ ಕಂದಗಲ್, ಕರಿಯಪ್ಪ ತೋಳ, ಡಾ.ನಾಗಪ್ಪ, ಯಮನಪ್ಪ ದಿನ್ನಿ, ಮೌನೇಶ ಪೂಜಾರಿ, ಭೀಮಸೇನಾಚಾರ್ಯ ರಾಜಪುರೋಹಿತ್, ವೆಂಕಟೇಶ ಅರಿಕೇರಿ, ಶರಣಬಸವ ಹಣಿಗಿ, ದಿಲೀಪ್‌ಸಾಬ್ ಮತ್ತು ಲಿಂಗರಾಜ ಇಲ್ಲೂರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.