ADVERTISEMENT

ಟಾಸ್ಕ್‌ವರ್ಕ್ ನೌಕರರಿಂದ ಮುಖ್ಯಮಂತ್ರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 7:00 IST
Last Updated 14 ಸೆಪ್ಟೆಂಬರ್ 2011, 7:00 IST

ಸಿರವಾರ: ತುಂಗಭದ್ರಾ ನೀರವಾರಿ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಟಾಸ್ಕ್‌ವರ್ಕ್ ನೌಕರರು ಖಾಯಂಗಾಗಿ ಒತ್ತಾಯಿಸಿ ಮುಖ್ಯಮಂತ್ರಿ ಸದಾನಂದಗೌಡ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.

25 ವರ್ಷಗಳಿಂದ ತುಂಗಭದ್ರಾ ನೀರಾವರಿ ಯೋಜನೆಯಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆ ವ್ಯಾಪ್ತಿಯ 1400 ಜನರು ವಿವಿಧ ಹುದ್ದೆಗಳಲ್ಲಿದ್ದಾರೆ. ಈ ಎಲ್ಲ ನೌಕರರನ್ನು ಸಂಪುಟದ ಉಪಸಮಿತಿಯಲ್ಲಿ ಸೇರಿಸಿ ಹುದ್ದೆಗೆ ಅನುಗುಣವಾಗಿ ವಿವಿಧ ಇಲಾಖೆಗಳಲ್ಲಿ ವಿಲೀನಗೊಳಿಸಿ ಕನಿಷ್ಠ ವೇತನ ನಿಗದಿ ಮಾಡಬೇಕೆಂದು ಬಿಜೆಪಿಯ ರಾಯಚೂರು ಗ್ರಾಮಾಂತರ ಘಟಕದ ಅಧ್ಯಕ್ಷ ಶಿವರಾಜ ಮರ್ಚೆಟಾಳ್ ನೇತ್ರತ್ವದಲ್ಲಿ ಮನವಿ ಸಲ್ಲಿಸಿದರು.

ತುಂಗಭದ್ರಾ ಎಡದಂಡೆ ಕಾಲುವೆ ಟಾಸ್ಕ್ ನೌಕರರ ಸಂಘದ ಯರಮರಸ್ ವಿಭಾಗದ ಅಧ್ಯಕ್ಷ ಬಸವರಾಜ ಮರಕಮದಿನ್ನಿ, ಸಿರವಾರ ವಿಭಾಗದ ಪುರುಷೋತ್ತಮ, ರಾಮಣ್ಣ, ಮುನಿರಾಬಾದ್‌ದಿಂದ ಹುಲಿಗೆಣ್ಣ, ಕೊಪ್ಪಳದಿಂದ ಪಾಕ್ಷ ಮತ್ತು ಕಿನ್ನಾಳದಿಂದ ಪರಸಪ್ಪ ಇನ್ನಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.