ಲಿಂಗಸುಗೂರು: ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಅವರು ವಯೋವೃದ್ಧರಾಗಿದ್ದು ಮುಸ್ಲಿಂ ಸಮುದಾಯದಲ್ಲಿ ಇತರೆ ಯುವಕರಿಗೆ ಆದ್ಯತೆ ನೀಡಿ ಅವರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟಲು ಹೈಕಮಾಂಡ್ ತೆಗೆದುಕೊಂಡಿರುವ ಕ್ರಮ ಸ್ವಾಗತಾರ್ಹ ಎಂದು ಸಚಿವ ಸತೀಶ ಜಾರಕಿಹೊಳಿ ಸಮರ್ಥಿಸಿಕೊಂಡರು.
ಬುಧವಾರ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಸನ್ಮಾನ ಸ್ವೀಕರಿಸಿ , ಬಳಿಕ ಮಾತನಾಡಿ, ಕಾಂಗ್ರೆಸ್ ಯಾವುದೇ ಒಂದು ಧರ್ಮ, ಜಾತಿ ಪರ ಕೆಲಸ ಮಾಡಲ್ಲ. ರಾಷ್ಟ್ರದ ಧರ್ಮೀಯರ ಹಿತ ಕಾಪಾಡುವ ಜೊತೆಗೆ ರಾಷ್ಟ್ರದ ಭದ್ರತೆಗೆ ತ್ಯಾಗ ಬಲಿದಾನ ಮಾಡುತ್ತ ಬಂದಿರುವುದು ಇತಿಹಾಸ. ಪ್ರತಿಯೊಂದು ಪಕ್ಷದಲ್ಲಿರುವಂತೆ ತಮ್ಮ ಪಕ್ಷದಲ್ಲೂ ಕೂಡ ಕೆಲ ಆಂತರಿಕ ಗೊಂದಲಗಳಿವೆ. ನಾವೆಲ್ಲ ಒಗ್ಗಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದೇವೆ ಎಂದರು.
ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೂಪನಗೌಡ ಕರಡಕಲ್ಲ, ಮುನ್ವರ್‌ಖಾನ್. ಮುಖಂಡರಾದ ಪರಶುರಾಮ ನಗನೂರು, ಲಾಲಅಹ್ಮದಸಾಬ, ಖಾದರಪಾಷ, ಅಹ್ಮದ ಚಾವೂಸ್, ಕುಮಾರಸ್ವಾಮಿ, ಮಲ್ಲಣ್ಣ ವಾರದ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.