ADVERTISEMENT

ತೀವ್ರ ಜ್ವರದ ಕಾಟ: ಜನರ ಆತಂಕ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 6:29 IST
Last Updated 14 ಸೆಪ್ಟೆಂಬರ್ 2013, 6:29 IST

ಕವಿತಾಳ: ಸಮೀಪದ ಅಮೀನಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಚಾಪುರ ಗ್ರಾಮದಲ್ಲಿ ಬಹುತೇಕ ಮನೆಗಳಲ್ಲಿ  ಇಬ್ಬರಿಗಿಂತ ಹೆಚ್ಚು ಜನ ತೀವ್ರ ಜ್ವರ, ಕೈಕಾಲುಗಳಲ್ಲಿ ವಿಪರೀತ ನೋವು ಮತ್ತು ವಾಂತಿ ಭೇದಿಯಿಂದ ಬಳಲುತ್ತಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.

ಕಳೆದ ಒಂದು ವಾರದಿಂದ ಈ ರೀತಿ ರೋಗ ಕಾಣಿಸಿಕೊಂಡಿದ್ದು ಮಹಿಳೆ­ಯರು ಮಕ್ಕಳು ನರಳುತ್ತಿದ್ದಾರೆ ಎಂದು ಗ್ರಾಮದ ಹನುಮನಗೌಡ ತಿಳಿಸಿದ್ದಾರೆ.
 

ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಡಾ.ರಾಜೇಂದ್ರ ಬೆನಕನಾಳ ಅವರು ಪ್ರಾರ್ಥನಾ ಮಂದಿರದಲ್ಲಿ ಸಾಮೂಹಿಕ ಚಿಕಿತ್ಸೆ ನೀಡಿದರು. ಗ್ರಾಮದ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ ಗ್ರಾಮದಲ್ಲಿ 150ಕ್ಕೂ ಹೆಚ್ಚಿನ ಜನರು ರೋಗದಿಂದ ಬಳಲುತ್ತಿದ್ದು ಶಂಕಿತ ಜ್ವರ ಎಂದು ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ  ಸ್ಪಂದಿಸು­ತ್ತಿದ್ದು ಒಂದು ವಾರದಲ್ಲಿ ರೋಗ ನಿಯಂತ್ರ­ಣಕ್ಕೆ ಬರುತ್ತದೆ ಎಂದರು. ರೋಗಿಗಳ ರಕ್ತವನ್ನು ಪರೀಕ್ಷೆಗೆ ಕಳುಹಿ­ಸಿದ್ದು ವರದಿ ಬಂದ ನಂತರ­ಚಿಕೂನ್‌­ಗುನ್ಯಾ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು. ಅಂದಾಜು 650 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಬಹುತೇಕರು ಜ್ವರದಿಂದ ಬಳಲುತ್ತಿದ್ದಾರೆ ಎಂದು ಚಿಕಿತ್ಸೆಗೆ ಆಗಮಿಸಿದ ಮೆಹಬೂಬ್ ಮುಲ್ಲಾ, ಮಲ್ಲಮ್ಮ, ಗಂಗಮ್ಮ, ಮಾಸುಂಬೀ, ಯಲ್ಲಮ್ಮ, ಕಾವೇರಿ ಮುಂತಾದವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT