ADVERTISEMENT

`ನಗರೀಕರಣದಿಂದ ಪರಿಸರ ನಾಶ'

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2013, 8:31 IST
Last Updated 6 ಆಗಸ್ಟ್ 2013, 8:31 IST

ಹಟ್ಟಿ ಚಿನ್ನದ ಗಣಿ: `ಕೈಗಾರಿಕೆಗಳ ಸ್ಥಾಪನೆಗೆ ಅರಣ್ಯ ನಾಶ ಮಾಡಲಾಗಿದೆ. ಪರಿಸರ ನಾಶವಾಗಲು ಆಧುನೀಕರಣ, ನಗರೀಕರಣ ಜನಸಂಖ್ಯೆ ಸ್ಫೋಟ ಪ್ರಮುಖ ಕಾರಣ' ಎಂದು ಹಟ್ಟಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಬಸಮ್ಮ ಪರಮೇಶ ಹೇಳಿದರು.

ಸೋಮವಾರ ಇಲ್ಲಿನ ವಿನಾಯಕ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹಸಿರುಪಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿನಾಯಕ ವಿದ್ಯಾ ಸಂಸ್ಥೆಯ ಸಂಸ್ಥಾಪಕ ನರಸಪ್ಪ ಯಾದವ್ ಮಾತನಾಡಿ, ಪರಿಸರ ಹಾನಿ ತುಂಬಲು ಹಸಿರು ಬೆಳೆಸಬೇಕು. ಹಸಿರು ನಾಶದ ಪರಿಣಾಮ ಭೂಮಿಯ ಮೇಲ್ಮೈ, ಒಳಮೈಯಲ್ಲಿ ಉಷ್ಣಾಂಶ ಹೆಚ್ಚಾಗಿದೆ. ಪರಿಸರ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕು ಎಂದು ಹೇಳಿದರು.

ಉಪನ್ಯಾಸಕ ಪ್ರಭು ಬಡಿಗೇರ, ಶಂಶುದ್ದೀನ್ ವಕೀಲ, ಮಹೇಂದ್ರ ಕುರ್ಡಿಗಿ,  ವಿದ್ಯಾರ್ಥಿಗಳಾದ ಉಮಾ ದೇವಿ, ಸಂಗಮ್ಮ, ಕವಿತಾ ಪರಿಸರದ ಕುರಿತ ಅನಿಸಿಕೆ ವ್ಯಕ್ತಪಡಿಸಿದರು.

ಶೇಖರಪ್ಪ ಬಡಿಗೇರ, ಉಪನ್ಯಾಸಕರು, ಶಿಕ್ಷಕರು ಇದ್ದರು. ಶ್ವೇತಾ ನಿರೂಪಿಸಿ, ಅಂಜಲಿ ಸ್ವಾಗತಿಸಿ, ಸೈಯದ್ ರಿಯಾಜ ಖಾದ್ರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.