ADVERTISEMENT

ಪಂಚಭೂತ ಖರೀದಿ ಕ್ರೂರ ಪದ್ಧತಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 9:45 IST
Last Updated 24 ಫೆಬ್ರುವರಿ 2011, 9:45 IST

ಸಿಂಧನೂರು: ಪಂಚಭೂತ ಗಳಲ್ಲೊಂದಾದ ನೀರನ್ನು ಖರೀದಿ ಮಾಡುವ ಮತ್ತು ಮಾರಾಟ ಮಾಡುವ ವ್ಯವಹಾರವೇ ಅತ್ಯಂತ ಕ್ರೂರ ಪದ್ಧತಿಯಾಗಿದೆ ಎಂದು ಬಸವ ಕೇಂದ್ರದ ಸಹಗೌರವಾಧ್ಯಕ್ಷ ಪಿ. ವೀರಭದ್ರಪ್ಪ ಕುರುಕುಂದಿ ವಿಷಾದ ವ್ಯಕ್ತಪಡಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕುಡಿಯುವ ನೀರು ಖಾಸಗೀಕರಣ ವಿರೋಧಿ ಸಮಿತಿ ಯಿಂದ ಮಂಗಳವಾರ ಸಂಜೆ ಹಮ್ಮಿ ಕೊಂಡಿದ್ದ ಕುಡಿಯುವ ನೀರು ಖಾಸಗೀಕರಣ ನ್ಯಾಯವೇ? ಕುರಿತ ವಿಚಾರ ಸಂಕಿರಣ  ಬಿಂದಿಗೆಯಿಂದ ನೀರು ಕುಡಿಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ನೀರು, ಅಗ್ನಿ, ವಾಯು, ಭೂಮಿ ಮತ್ತು ಆಕಾಶ ಇವು ಜಗತ್ತಿನ ಪಂಚಭೂತಗಳಾಗಿದ್ದು, ಇವುಗಳನ್ನು ಹಣಕೊಟ್ಟು ಖರೀದಿಸುವ ದುರ್ಗತಿ ಮನುಕುಲಕ್ಕೆ ಬರಬಾರದು ಎಂದು ಕಳವಳ ವ್ಯಕ್ತಪಡಿಸಿದರು.

ಉಪನ್ಯಾಸ ನೀಡಿದ ಕೊಪ್ಪಳ ಜಿಲ್ಲಾ ಬಚಾವ್ ಆಂದೋಲನಾ ಸಮಿತಿ ಜಿಲ್ಲಾಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ ಖಾಸಗೀಕರಣದ ವಿರುದ್ಧ ಜನಾಂದೋಲನ ಆಗಬೇಕು ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೈತ ಮುಖಂಡ ಹನುಮನಗೌಡ ಬೆಳಗುರ್ಕಿ ಕುಡಿಯುವ ನೀರಿನ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ಕೊಡುವುದು ಸಂವಿಧಾನಕ್ಕೆ ಅಪ ಚಾರ. ನಗರಸಭೆ ಮೀಟರ್ ಅಳವಡಿಸಿದರೆ ಆಂದೋಲನ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಟಿ.ಯು.ಸಿ.ಐ.ರಾಜ್ಯ ಅಧ್ಯಕ್ಷ, ಸಮಿತಿ ಸಂಚಾಲಕ ಡಿ.ಎಚ್. ಪೂಜಾರ್ ಮಾತನಾಡಿ, 28ರಂದು ಅಮೆರಿಕದ ವಾಟರ್ ಟ್ರೇಡ್ ಮಷಿನ್ ಕಂಪೆನಿಗೆ ಕರ್ನಾಟಕದ 16 ಜಿಲ್ಲೆಗಳ ನೀರಿನ ನಿರ್ವಹಣೆ ಜವಾ ಬ್ದಾರಿಯನ್ನು ವಹಿಸುವ ಕಾರ್ಯ ಅಂತಿಮಗೊಳ್ಳಲಿದೆ ಎಂದರು.ಸಮುದಾಯದ ಎಸ್. ದೇವೇಂದ್ರ ಗೌಡ, ವೆಂಕನಗೌಡ ಗದ್ರಟಗಿ, ಡಾ.ತಾಹೀರ ಅಲಿ, ಬಸವರಾಜ ಬಾದರ್ಲಿ ಮಾತನಾಡಿದರು. ಅಮೀನಬಾಷಾ ದಿದ್ದಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.