ರಾಯಚೂರು: ಜಿಲ್ಲೆಯ ನಗರ, ತಾಲೂಕು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಭೂ ಮಾಲೀಕರು ವಸತಿ ಬಡಾವಣೆ ನಿರ್ಮಿಸಿ ನಿವೇಶನ ರಚಿಸಿ ಮಾರಾಟ ಮಾಡಲು, ಕೃಷಿ ಜಮೀನು ಕೃಷಿಯೇತರ ಜಮೀನಾಗಿ ಪರಿವರ್ತನೆ ಮಾಡಲು ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿದ ಅವರು, ಬಡಾವಣೆ ನಕ್ಷೆ ಅನುಮೋದಿಸಿಕೊಂಡು, ನಕ್ಷೆಯ ಪ್ರಕಾರ ಚರಂಡಿ, ರಸ್ತೆ, ಉದ್ಯಾನ ಜಾಗ ಹಾಗೂ ಸಾರ್ವಜನಿಕ ಉಪಯೋಗದ (ಸಿ.ಎ ಸೈಟ್) ಖಾಲಿ ಜಾಗಗಳನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಬಿಟ್ಟುಕೊಟ್ಟು ಉಳಿದ ಜಾಗದಲ್ಲಿ ನಿವೇಶನಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಬೇಕು ಎಂದು ಹೇಳಿದ್ದಾರೆ.
ಆದರೆ, ಕೆಲ ಭೂ ಮಾಲೀಕರು ಬಿನ್ ಶೇತ್ಕಿಯನ್ನು ಮಾಡಿಕೊಂಡು ನಂತರ ಪ್ರಾಧಿಕಾರದಿಂದ ಬಡಾವಣೆ ನಕ್ಷೆ ಅನುಮೋದಿಸದೇ ಇರುವುದು. ನಕ್ಷೆಗಳನ್ನು ಪಡೆದುಕೊಂಡು ನಕ್ಷೆ ಪ್ರಕಾರ ಚರಂಡಿ, ರಸ್ತೆ, ಉದ್ಯಾನ ನಿರ್ಮಾಣ ಮಾಡದೇ ಹಾಗೂ ಉದ್ಯಾನಕ್ಕೆ ಖಾಲಿ ಜಾಗ ಬಿಟ್ಟಿರುವ ಸ್ಥಳದಲ್ಲಿ ಕಾನೂನು ಬಾಹಿರವಾಗಿ ನಿವೇಶಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಿರುವುದು ಕಂಡು ಬಂದಿದ್ದು.
ನಿವೇಶನ ನಿರ್ಮಾಣವಾಗದೇ ಹಾಗೆಯೇ ನಿವೇಶನ ಖರೀದಿಸಿದ್ದಾರೆ ಮುಂದಿನ ದಿನಗಳಲ್ಲಿ ಸರ್ಕಾರದ ನಿಯಮಗಳಂತೆ ಕಾನೂನು ಕ್ರಮ ಕೈಗೊಂಡರೆ ನಿವೇಶನ ಖರೀದಿದಾರರೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.