ADVERTISEMENT

ಮಧ್ಯಾಹ್ನ ಬಿಸಿಲು: ಸಂಜೆ ಸುರಿದ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 6:54 IST
Last Updated 16 ಜುಲೈ 2013, 6:54 IST

ರಾಯಚೂರು: ಮಧ್ಯಾಹ್ನ ಬಿಸಿಲು ಮತ್ತು ಸೆಖೆ... ಸಂಜೆ ಕೆಲ ಹೊತ್ತು ನೆಲ-ಮುಗಿಲು ಒಂದಾಗಿಸಿದ ಧಾರಾಕಾರ ಮಳೆ.
ಇದು ನಗರದಲ್ಲಿನ ಜನ ಸೋಮವಾರ ಅನುಭವಿಸಿದ ವಾತಾವರಣ. ಸಂಜೆ 7 ಗಂಟೆ ಹೊತ್ತಿಗೆ ಇದ್ದಕ್ಕಿದ್ದಂತೆಯೇ  ಧಾರಾಕಾರ ಮಳೆ ಸುರಿಯಿತು. ಆಕಾಶ-ಭೂಮಿ ಒಂದು ಮಾಡಿದಂತೆ ಸುರಿಯುತ್ತಿದ್ದ ಧಾರಾಕಾರ ಮಳೆ ಕಂಡಿತು. ಧಾರಾಕಾರ ಮಳೆಗೆ ರಭಸದ ಗಾಳಿಯೂ ಸಾಥ್ ನೀಡಿದ್ದರಿಂದ ಸೈಕ್ಲೋನ್ ಬಂತೇನ್ರಿ ಎಂದು ಜನ ಭಯಗೊಂಡರು.

ಕೇವಲ 15 ನಿಮಿಷ ಈ ರೀತಿ ಸುರಿದ ಮಳೆಗೆ ನಗರದ ಪ್ರಮುಖ, ಬಡಾವಣೆ ರಸ್ತೆಗಳು ಮಳೆ ನೀರಿನಿಂದ ಆವೃತವಾದವು. ವಾಹನ ಸವಾರರು ರಸ್ತೆಯಲ್ಲಿ ಪ್ರವಾಹ ರೀತಿ ಹರಿಯುತ್ತಿದ್ದ ಮಳೆ ನೀರಿನಲ್ಲಿ ಸಿಲುಕಿ ತೊಂದರೆ ಪಟ್ಟರು. ರಸ್ತೆ ಅಕ್ಕಪಕ್ಕದ ಅಂಗಡಿ ಮುಂಗಟ್ಟು, ಚಿಕ್ಕಪುಟ್ಟ ವ್ಯಾಪಾರಸ್ಥರ ಛಾವಣಿ ಹಾರಾಡಿದ್ದು ಕಂಡು ಬಂದಿತು.

ಬರೀ ರಸ್ತೆ ವಿಸ್ತರಣೆ, ಕಟ್ಟಡ ತೆರವು ಕಾರ್ಯಕ್ಕೆ ಆಡಳಿತ ಯಂತ್ರ ಗಮನಹರಿಸಿದ್ದು, ಮಳೆ ನೀರು ಹರಿದು ಚರಂಡಿ, ರಾಜ ಕಾಲುವೆ ಮೂಲಕ ಊರಾಚೆ ಸೇರಲು ವ್ಯವಸ್ಥೆ ಮಾಡಿಲ್ಲ. ಈ ರೀತಿ ಧಾರಾಕಾರ ಮಳೆ ಬಂದರೆ ಪ್ರಮುಖ ರಸ್ತೆಗಳೇ ಹೊಂಡವಾಗುತ್ತವೆ. ತಗ್ಗು ಪ್ರದೇಶ ಬಡಾವಣೆ ಸ್ಥಿತಿ ಗಂಭೀರ ಎಂದು ಮಳೆಯಲ್ಲಿ ಸಿಕ್ಕಿಹಾಕಿಕೊಂಡ ಜನರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.