ADVERTISEMENT

ಮರಳು ಅಕ್ರಮ ಸಾಗಾಟಕ್ಕೆ ಕಡಿವಾಣ ಇಲ್ಲ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2011, 10:35 IST
Last Updated 8 ನವೆಂಬರ್ 2011, 10:35 IST
ಮರಳು ಅಕ್ರಮ ಸಾಗಾಟಕ್ಕೆ ಕಡಿವಾಣ ಇಲ್ಲ
ಮರಳು ಅಕ್ರಮ ಸಾಗಾಟಕ್ಕೆ ಕಡಿವಾಣ ಇಲ್ಲ   

ದೇವದುರ್ಗ: ಕಳೆದ ವರ್ಷದ ಟೆಂಡರ್ ನಿಯಮಾವಳಿ ಪ್ರಕಾರ ತಾಲ್ಲೂಕಿನಲ್ಲಿ ಮಾರ್ಚ್ 2011ಕ್ಕೆ ಮರಳು ಸಾಗಾಣಿಕೆಗೆಯನ್ನು ರದ್ದು ಪಡಿಸಲಾಗಿತ್ತು. ಹೊಸ ಟೆಂಡರ್ ಆಗುವರಿಗೂ ಯಾವುದೇ ಕಾರಣಕ್ಕೂ ಮರಳನ್ನು ಸಾಗಾಣಿಕೆ ಆಗದಂತೆ ನೋಡಿಕೊಳ್ಳಲು ಸ್ಥಳೀಯ ಲೋಕೋಪಯೋಗಿ ಇಲಾಖೆ ಮತ್ತು ಕಂದಾಯ ಇಲಾಖೆಗೆ ಜಿಲ್ಲಾಧಿಕಾರಿಗಳು ಜವಾಬ್ದಾರಿ ನೀಡಿದ್ದರೂ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವುದು ಮಾತ್ರ ನಿಲ್ಲಲಿಲ್ಲ. 

 ತಾಲ್ಲೂಕಿನ ಕೆಲವು ಕಡೆ ಮರಳು ಸಾಗಾಣಿಕೆಗೆ ಪರವಾನಗಿ ನೀಡಲಾಗಿದೆ. ಇದೆ ಪರವಾನಗಿಯ ದಾಖಲೆಗಳನ್ನು ಇತರ ಸ್ಥಳಗಳಿಗೆ ಬಳಕೆ ಮಾಡಿಕೊಂಡು ಹಗಲು, ರಾತ್ರಿ ಎನ್ನದೇ ಮರಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವುದು ಮತ್ತು ದಾಸ್ತಾನು ಮಾಡಿಕೊಳ್ಳುವುದು ನಡೆದರೂ ಜಾಣ ಕುರಡರಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ.

ಅಕ್ರಮವಾಗಿ ಮರಳು ಸಾಗಾಣಿಕೆ ಮಾತ್ರ ನಿರಂತರವಾಗಿ ನಡೆದಿದ್ದರೂ ಲೋಕೋಪಯೋಗಿ ಇಲಾಖೆ ಮಾತ್ರ ಇದುವರಿಗೂ ಸಂಬಂಧಿಸಿದವರ ವಿರುದ್ಧ ಕ್ರಮಕ್ಕೆ ಮುಂದಾಗದೆ ಮೌನಕ್ಕೆ ಶರಣಾಗಿದೆ.

ಕ್ರಮಕ್ಕೆ ಹಿಂದೇಟು: ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಕೆಲವು ಗ್ರಾಮಗಳ ಮುಖಂಡರು ಈಗಾಗಲೇ ಜಿಲ್ಲಾಧಿಕಾರಿಗಳವರೆಗೂ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ. ಆದರೆ ಮರಳು ಸಾಗಾಣಿಕೆ ವ್ಯವಹಾರ ಬಹುತೇಕ ಕಡೆ ಪ್ರಭಾವಿ ರಾಜಕೀಯ ವ್ಯಕ್ತಿಗಳೇ ಇರುವುದರಿಂದ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ಅಕ್ರಮ ಮರಳು ಸಾಗಾಣಿಕೆ ಕುರಿತು ಮಾಹಿತಿ ನೀಡಲು ಸಹ ಭಯ ಪಡುವಂತ ವಾತಾವರಣ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.