ADVERTISEMENT

ರಂಗಮಂದಿರ ಅವ್ಯವಸ್ಥೆ: ಡಿಸಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 5:58 IST
Last Updated 3 ಜುಲೈ 2013, 5:58 IST

ರಾಯಚೂರು: ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಘಟಕ ಮನವಿ ಮೇರೆಗೆ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಶೌಚಾಲಯ ಹಾಳಾಗಿರುವುದು, ಗ್ರೀನ್ ರೂಮ್ ಛತ್ತು ಕುಸಿದಿರುವುದು, ನಾಟಕ ತಾಲೀಮಿಗಾಗಿ ಇರುವ ಕೊಠಡಿ ಅವ್ಯವಸ್ಥೆ, ನೆರಳು-ಬೆಳಕು ವ್ಯವಸ್ಥೆಯ ವಸ್ತು ಹಾಳಾಗಿರುವುದನ್ನು ಗಮನಿಸಿದರು.

ಶೀಘ್ರ ದುರಸ್ತಿ ಭರವಸೆ : 25 ಲಕ್ಷ ಅನುದಾನವಿದೆ. ಧ್ವನಿ ವ್ಯವಸ್ಥೆ, ಪರದೆ, ಗ್ರೀನ್ ರೂಮ್, ಶೌಚಾಲಯ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಈ ಕುರಿತ ಯೋಜನೆ ತಯಾರಿಸಿ ಕಳುಹಿಸಿಕೊಡಬೇಕು. ಬೇಗ ಹಣ ಬಿಡುಗಡೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

ಆವಿಷ್ಕಾರ ಸಂಸ್ಥೆ ಜಿಲ್ಲಾ ಸಂಚಾಲಕ ಚನ್ನಬಸವ ಜಾನೇಕಲ್, ಹಿರಿಯ ಕಲಾವಿದ ಕೆ ಕರಿಯಪ್ಪ ಮಾಸ್ತರ್, ಆಂಜನೇಯ ಜಾಲಿಬೆಂಚಿ, ತಾಯಣ್ಣ ಯರಗೇರಾ, ಕೆ ಯಲ್ಲಪ್ಪ, ಮಲ್ಲಿಕಾರ್ಜುನ, ಅಲ್ತಾಫ ರಂಗಮಿತ್ರ,  ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಭೀಮರೆಡ್ಡಿ, ನಾಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.