ADVERTISEMENT

ವಿರೋಧದ ನಡುವೆಯೂ ಪ್ರೇಮ ವಿವಾಹ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 10:05 IST
Last Updated 3 ಮಾರ್ಚ್ 2011, 10:05 IST

ಸಿಂಧನೂರು: ನಗರದ ಕಲ್ಯಾಣ ಬಸವಕೇಂದ್ರದಲ್ಲಿ ಬುಧವಾರ ಪ್ರಗತಿಪರ ಮುಖಂಡರು ಹಾಗೂ ಕರವೇ ಸಂಘಟನೆಯ ನೇತೃತ್ವದಲ್ಲಿ ಶಿಕ್ಷಕ ಭೀಮೇಶ (21)ಹಾಗೂ ಮಮತಾಶ್ರೀ (19) ಅವರ ಅಂತರ್ಜಾತಿ ವಿವಾಹ ಸರಳವಾಗಿ ನಡೆಯಿತು. ಕಳೆದ ನಾಲ್ಕು ವರ್ಷಗಳಿಂದ ಭೀಮೇಶ ಹಾಗೂ ಮಮತಾಶ್ರೀ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಬಗ್ಗೆ ಹುಡುಗಿಯ ಮನೆಯಿಂದ ವಿರೋಧ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಕಲ್ಯಾಣ ಬಸವಕೇಂದ್ರ ಅಧ್ಯಕ್ಷ ಮಹಾಂತ ಸ್ವಾಮೀಜಿ ಸಾಲಿಮಠ ಮುದುಗಲ್, ಸಿ.ಐ.ಟಿ.ಯು.ಜಿಲ್ಲಾ ಕಾರ್ಯದರ್ಶಿ ಶೇಕ್ಷಾಖಾದ್ರಿ, ವಾಣಿ.ಎಸ್.ಖಾದ್ರಿ, ಕರವೇ ನಾರಾಯಣಗೌಡ ಬಣದ ಅಧ್ಯಕ್ಷ ಗಂಗಣ್ಣ ಡಿಶ್, ಮಂಜುಳಾ ರಾಚಪ್ಪ, ನಗರ ಘಟಕದ ಅಧ್ಯಕ್ಷ ದಾವಲಸಾಬ ದೊಡ್ಡಮನಿ ,ವರ್ತಕರ ಸಂಘದ ಅಧ್ಯಕ್ಷ ಕಟ್ಟೆಪ್ಪ ಗುಂಜಳ್ಳಿ, ಸ್ನೇಹಾಶ್ರೀ ಮತ್ತಿತರ ಮುಖಂಡರ ಸಮ್ಮುಖದಲ್ಲಿ ಈ ಪ್ರೇಮಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ಹುಡುಗನ ತಂದೆ ಈರಪ್ಪ ಹಾಗೂ ತಾಯಿ ನೀಲಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.