ADVERTISEMENT

ಶ್ರದ್ಧಾ ಭಕ್ತಿಯ ಮಹಾಶಿವರಾತ್ರಿ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 10:00 IST
Last Updated 3 ಮಾರ್ಚ್ 2011, 10:00 IST
ಶ್ರದ್ಧಾ ಭಕ್ತಿಯ ಮಹಾಶಿವರಾತ್ರಿ ಆಚರಣೆ
ಶ್ರದ್ಧಾ ಭಕ್ತಿಯ ಮಹಾಶಿವರಾತ್ರಿ ಆಚರಣೆ   

ಲಿಂಗಸುಗೂರ: ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಮಹಾ ಶಿವರಾತ್ರಿ ಆಚರಣೆಯನ್ನು ಬುಧ ವಾರ ತಾಲ್ಲೂಕಿ ಮಸ್ಕಿ, ಹಟ್ಟಿ, ಮುದಗಲ್ಲ, ನಾಗರಹಾಳ, ಗುರುಗುಂಟಾ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಡಗರ ಸಂಭ್ರದಿಂದ ಆಚರಿಸಿರುವುದು ವರದಿಯಾಗಿದೆ.ಬುಧವಾರ ಬೆಳಿಗ್ಗೆ ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನ ಸ್ಕಾರಗಳು ನಡೆದಿರುವುದು ಸಾಮಾನ್ಯ ವಾಗಿ ಕಂಡು ಬಂದಿತು.

ಹಿಂದೂ ಸಂಪ್ರದಾಯದ ಬಹುತೇಕ ಕುಟುಂಬ ಗಳಲ್ಲಿ ಶಿವನ ಹೆಸರಿನಲ್ಲಿ ಉಪವಾಸ ವೃತ ಆಚರಣೆ ಕೈಗೊಂಡಿದ್ದರು. ಉಪವಾಸ ವೃತಸ್ಥರು ಲಿಂಗಪೂಜೆ ಮಾಡಲು ಪಂಚಾಮೃತ, ಉತ್ರಾಣಿ ಕಡ್ಡಿ, ಬಿಲ್ವ ಮತ್ತು ಬನ್ನಿ ಪತ್ರಿ, ಕರ್ಪೂರ, ಟೆಂಗಿನ ಕಾಯಿ ಅರ್ಪಿಸಿ ಪೂಜಾ ಕೈಂಕರ್ಯ ನಡೆಸಿದರು. ಹಣ್ಣು-ಹಂಪಲು, ಕಡಲೆ ಉಸುಳಿ, ಗೋದಿ ಹಿಟ್ಟಿನ ಗಾರಿಗೆ, ಕಜ್ಜೂರಿ, ಸಾಬುದಾನಿ ಉಪ್ಪಿಟ್ಟು, ಮಂಡಕ್ಕಿ ವಗ್ಗರಣಿ ಪ್ರಸಾದ ಸೇವನೆಯೊಂದಿಗೆ ಆಚರಣೆಗೆ ಕೊನೆ ಹಾಡಿದರು.

ಐತಿಹಾಸಿಕ ಪ್ರಸಿದ್ಧ ನವಲಿಯ ಜಡಿಶಂಕರಲಿಂಗ, ಸುಕ್ಷೇತ್ರ ಗುರು ಗುಂಟಾ ಅಮರೇಶ್ವರ, ಮುದಗಲ್ಲಿನ ರಾಮಲಿಂಗೇಶ್ವರ, ಸಜ್ಜಲಗುಡ್ಡದ ಶರಣಮ್ಮ ಅಮ್ಮನವರ ಮಠ, ಕೆಸರಟ್ಟಿ ಶಂಕಲಿಂಗ ಮಠ,  ಅಂಕಲಿಮಠದ ನಿರುಪಾದೇಶ್ವರ, ಚಿಕ್ಕಹೆಸರೂರ ಮತ್ತು ನಿಲೋಗಲ್ ಈಶ್ವರ ದೇವಸ್ಥಾನ, ಪಟ್ಟಣದ ಈಶ್ವರ ಮತ್ತು ನಗರೇಶ್ವರ ದೇವಸ್ಥಾನಗಳಲ್ಲಿ ದೀಪಾಲಂಕಾರ ಹಾಗೂ ವಿಶೇಷ ಕಾರ್ಯಕ್ರಮಗಳು ಜರುಗಿದವು.

ಸಂಜೆಯಾಗುತ್ತಿದ್ದಂತೆ ಮಹಿಳೆ ಯರು, ಮಕ್ಕಳು, ವಯೋವೃದ್ಧರು ಆದಿಯಾಗಿ ಈಶ್ವರ ದೇವಸ್ಥಾನಗಳಿಗೆ ತೆರಳಿ ಕಾಯಿ ಕರ್ಪೂರ ಅರ್ಪಿಸಿ, ತಮ್ಮ ಭಕ್ತಿ ಭಾವ ಮೆರೆದರು. ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ನಿರೀಕ್ಷೆ ಮೀರಿ ಭಕ್ತ ಸಮೂಹ ಆಗಮಿಸಿದ್ದರಿಂದ ನೂಕು ನುಗ್ಗಲು ಸಾಮಾನ್ಯವಾಗಿತ್ತು. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಕಂಡು ಬಂದಿತು.
ತಾಲ್ಲೂಕಿನ ಬಹುತೇಕ ಈಶ್ವರ ದೇವಸ್ಥಾನಗಳಲ್ಲಿ ರಾತ್ರಿಯಿಡಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.