ADVERTISEMENT

ಸಂವಿಧಾನ ಶಿಲ್ಪಿಗೆ ನುಡಿ ನಮನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 6:38 IST
Last Updated 7 ಡಿಸೆಂಬರ್ 2013, 6:38 IST

ರಾಯಚೂರು: ನಗರ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಶುಕ್ರವಾರ ಡಾ.ಬಿ.ಆರ್ ಅಂಬೇಡ್ಕರ್ ಅವರ 57ನೇ ಮಹಾಪರಿನಿರ್ವಾಣ ದಿನವನ್ನು ಆಚರಣೆ ಮಾಡಲಾಯಿತು.

ರಾಯಚೂರು ವರದಿ
ಜೆಸ್ಕಾಂ ಪರಿಶಿಷ್ಟ ಜಾತಿ–ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ: ಜೆಸ್ಕಾಂನ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧೀಕ್ಷಕ ಎಂಜಿನಿಯರ್ ಜಯಕುಮಾರ್ ಅವರು ಅಂಬೇಡ್ಕರ್ ಭಾವಚಿತ್ರಕ್ಕ ಮಾಲಾರ್ಪಣೆ ಮಾಡಿದರು. ಕಾರ್ಯನಿರ್ವಾಹಕ ಎಂಜಿನಿಯರ್ ಜೆ.ಪಿ ನಾಗರಾಜ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವನಗುತ್ತಿ, ಲೆಕ್ಕಾಧಿಕಾರಿ ಪೋಮಣ್ಣ ರಾಥೋಡ್, ಸಂಘದ ಅಧ್ಯಕ್ಷ ಲಿಂಗಪ್ಪ, ಕಾರ್ಯದರ್ಶಿ ಗೋಪಿ, ಆಂಜನೇಯ ರಾಂಪುರ, ಪ್ರಕಾಶ, ರಾಜಶೇಖರ, ತಾಯಪ್ಪ, ಪುಪ್ಪರಾಜ ಹಾಗೂ ಇತರರಿದ್ದರು.

ದಮ್ಮ ಮಹಾಸಭಾ: ದಮ್ಮ ಮಹಾಸಭಾ ಸಂಘಟನೆ ಪದಾಧಿಕಾರಿಗಳಿ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಕೆ.ಈ ಕುಮಾರ್, ಆಂಜನೇಯ ಕೊಂಬಿನ್, ವಿಶ್ವನಾಥ ಪಟ್ಟಿ, ವೆಂಕಟೇಶ ಕಲ್ಲೂರಕರ್, ಆರ್‌.ಸಿ ವೆಂಕಟೇಶ, ಮಹೇಶ, ಹನುಮಂತು, ನರಸಿಂಹಲು, ಶಂಕರ್‌, ಶಿವು, ವೆಂಕಟೇಶ ದಿನ್ನಿ, ದಿನೇಶಕುಮಾರ ಇತರರಿದ್ದರು.

ವಿದ್ಯುತ್ ನಿಗಮ ಎಸ್‌ಸಿಎಸ್‌ಟಿ ನೌಕರರ ಸಂಘ: ಶಕ್ತಿನಗರದಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ನೌಕರರ ಸಂಘದಿಂದ ಏರ್ಪಡಿಸಿದ್ದ ಕಾರ್ಯಕ್ರಮ­ದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಆರ್‌ಟಿಪಿಎಸ್‌ ಕಾರ್ಯನಿರ್ವಾಹಕ ನಿರ್ದೇಶಕ ಸಿ ವೇಣುಗೋಪಾಲ್ ಮಾತನಾಡಿದರು. ಮುಖ್ಯ ಎಂಜಿನಿಯರ್ ಚಿನ್ನ ಸೋಮಯ್ಯ, ಅಧೀಕ್ಷಕ ಎಂಜಿನಿಯರ್ ಎನ್ ರವಿ, ಸಂಘದ ಕಾರ್ಯದರ್ಶಿ ಭೀಮಯ್ಯ ನಾಯಕ, ಈರಣ್ಣ, ನಂಜುಂಡಸ್ವಾಮಿ, ಧಾನಾ ನಾಯ್ಕ, ಸಣ್ಣ ಅಯ್ಯಪ್ಪ, ಸೂಗಪ್ಪ, ಬಸಪ್ಪ, ಕರಿಯಪ್ಪ, ಶ್ರೀನಿವಾಸ, ವಸಂತ ಎಂ, ಸತ್ಯನಾಥ, ಜಾಲಪ್ಪ, ಇನ್ನಿತರರಿದ್ದರು. ರಂಗಪ್ಪ ವಂದಿಸಿದರು.

ಛಲವಾದಿ ಮಹಾಸಭಾ: ಬುದ್ಧ ಸಮಿತಿ, ಛಲವಾದಿ ಮಹಾ ಸಭಾ ಮತ್ತು ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಸಮಿತಿಗಳ ಪದಾಧಿಕಾರಿಗಳು ಮತ್ತು ಮುಖಂಡರು ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬುದ್ಧ ವಂದನೆಯನ್ನು ರವಿಕುಮಾರ ರಾಂಪುರ ನೆರವೇರಿಸಿದರು. ಡಾ.ಅಂಬೇಡ್ಕರ್ ಮತ್ತು ಬುದ್ಧ ಪುತ್ಥಳಿ ಸಮಿತಿ ಮುಖಂಡರಾದ ಡಾ.ಮಹಾಲಿಂಗ, ರವೀಂದ್ರನಾಥ ಪಟ್ಟಿ, ಛಲವಾದಿ ಮಹಾಸಭಾದ ಜಿಲ್ಲಾ ಘಟಕ ಅಧ್ಯಕ್ಷ ಜಗನ್ನಾಥ ಸುಂಕಾರಿ, ಭಾರತೀಯ ದಲಿತ ಪ್ಯಾಂಥರ್ ರಾಜ್ಯ ಉಪಾಧ್ಯಕ್ಷ ಆರ್‌ ತಿಮ್ಮಾರೆಡ್ಡಿ, ಜಿಲ್ಲಾ ಘಟಕ ಅಧ್ಯಕ್ಷ ಗುರುನಾಥ ಸುಂಕಾರಿ, ನಗರಸಭೆ ಸದಸ್ಯ ಮಹಾಲಿಂಗ ರಾಂಪೂರ, ಭೀಮಣ್ಣ ಮಾಚರ್ಲ, ವಸಂತ, ಡಾ.ನಂದೂರಕರ್ ಮುಂತಾದವರು ಪುಷ್ಪದೊಂದಿಗೆ ಬುದ್ಧ ವಂದನೆ ಮಾಡಿದರು.

ವಿರೂಪಾಕ್ಷ ಹೊಸೂರು,  ನಗರಸಭೆ ಸದ್ಯ ಆಂಜನೇಯ ಯಕ್ಲಾಪುರ,  ರಮೇಶ, ಛಲವಾದಿ ಮಹಾಸಭಾದ ಆಂಜನೇಯ ರಾಂಪೂರ, ಮಲ್ಲೇಶ ಕೊಲಿಮಿ, ಶಂಕರ, ವೆಂಕಟಸ್ವಾಮಿ, ಅಶೋಕ ಅರೋಲಿಕರ್, ಅಶೋಕ ಅಂಬಾಭವಾನಿ, ಸತ್ಯನಾರಾಯಣ, ರವೀಂದ್ರನಾಥ ರಾಂಪೂರ, ವೆಂಕಟೇಶ ಅರೋಲಿಕರ್, ಭೀಮಣ್ಣ ಮಂಚಾಲ್, ಮಧುಕಾಂತ, ಮಲ್ಲೇಶ ಭಕ್ತಿ, ಕೆ ಉದಯಕುಮಾರ, ಹಂಪರೆಡ್ಡಿ ಯಕ್ಲಾಸಪುರ, ಅಂಬೇಡ್ಕರ್ ಯುವಕ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.

ಲಿಂಗಸುಗೂರು ವರದಿ
ಡಾ. ಬಿ.ಆರ್‌. ಅಂಬೇಡ್ಕರ್ ಅಸ್ಪೃಶ್ಯರ ಹಾಗೂ ಶೋಷಿತ ವರ್ಗದ ಧ್ವನಿಯಾಗಿ ಬೆಳೆದು ನಿಂತರು. ಅವರ ಅವಿರತ ಹೋರಾಟದ ಬದುಕು ನಮಗೆಲ್ಲ ಮಾದರಿ ಎಂದು ಉಪ ವಿಭಾಗಾಧಿಕಾರಿ ಟಿ. ಯೋಗೇಶ ಹೇಳಿದರು.

ತಾಲ್ಲೂಕು ಆಡಳಿತ ಆಯೋಜಿಸಿದ್ದ ಅಂಬೇಡ್ಕರ್‌ ಮಹಾ ಪರಿನಿರ್ವಾಣ ಕಾರ್ಯ­ಕ್ರಮದಲ್ಲಿ ಮಾತನಾಡಿ, ಅಸ್ಪೃಶ್ಯತೆ, ಅಸಮಾನತೆ ಈ ಸಮಾಜಕ್ಕೆ ಅಂಟಿದ ಶಾಪ. ಮೌಢ್ಯತೆ ಹೋಗಲಾಡಿಸಿ, ಶೋಷಿತರ ಬಾಳಿಗೆ ಕಾನೂನಾತ್ಮಕ ಬೆಳಕು ನೀಡುವಲ್ಲಿ ಅಂಬೇಡ್ಕರ್‌ ಕೊಡುಗೆ ಅಪಾರ ಎಂದು ಹೇಳಿದರು.

ಅಂಬೇಡ್ಕರ ಅವರ ಹೋರಾಟ, ಜೀವನ ಚರಿತ್ರೆ ಕುರಿತು ಪ್ರೊ. ಶರಣಬಸವ ವಿಶೇಷ ಉಪನ್ಯಾಸ ನೀಡಿದರು.
ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಸಮ್ಮ ಪರಮಾತ್ಮ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗುಂಡಪ್ಪ ನಾಯಕ. ಜಿಪಂ ಸದಸ್ಯರಾದ ಭೂಪನಗೌಡ ಕರಡಕಲ್ಲ, ಎಚ್‌.ಬಿ. ಮುರಾರಿ. ಸಮಾಜ ಕಲ್ಯಾಣ ಅಧಿಕಾರಿ ಎಲ್‌.ಬಿ. ಸಜ್ಜನ, ತಹಶೀಲ್ದಾರ ಖಾಜಾಹುಸೇನ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿವಪುತ್ರ ಶಿಕ್ಷಕ ಪಂಚಶೀಲ ಪಠಣ ಮಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ. ಪ್ರಭಾಕರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಶ್ರದ್ಧಾಂಜಲಿ: ನಲ್ಸೆನ್‌ ಮಂಡೇಲ ನಿಧನಕ್ಕೆ ಸಭೆಯ ಕೊನೆಯಲ್ಲಿ ಎರಡು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಾಲಹಳ್ಳಿ ವರದಿ

ಸಂವಿಧಾನ ಶಿಲ್ಪಿ ಡಾ.ಬಿಆರ್‌ ಅಂಬೇಡ್ಕರ್‌ ರವರ 57ನೇ ಮಹಾ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿನ ಭಾವಚಿತ್ರಕ್ಕೆ ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರು ಮಾಲಾರ್ಪಣೆ ಮಾಡಿ ಮಾತನಾಡಿ, ಅಂಬೇಡ್ಕರ್‌ ರವರ ಗುಣಗಾನ ಮಾಡಿದರು. ದಲಿತ ಮುಖಂಡ ಮೇಲಪ್ಪ ಭಾವಿಮನಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಶಿವಣ್ಣ ದೇಸಾಯಿ. ಮಾಜಿ ಗ್ರಾ.ಪಂ ಅಧ್ಯಕ್ಷ ರಂಗಣ್ಣ ಕೋಲ್ಕಾರ್‌, ಗ್ರಾ.ಪಂ ಸದಸ್ಯರಾದ ಚಂದಪ್ಪ ಭಾವಿಮನಿ, ತಿಪ್ಪಯ್ಯ ನಾಯಕ, ಯಾಸೀನ್‌ ಸಾಬ್‌ ಮುಲ್ಲಾ, ಶಾಮೀದ್‌ ಸಾಬ್‌ ಆರ್ತಿ, ಮುಖಂಡರಾದ ಪೂರ್ಣಪ್ರಜ್ಞ ದೇಸಾಯಿ, ಬಸವರಾಜ ಪಾಣಿ, ನಾಸೀರುದ್ದಿನ್‌ ಮುಲ್ಲಾ, ಖಾಜಾಹುಸೇನ್‌, ಸಾಬಣ್ಣ ಕಮಲದಿನ್ನಿ, ರಾಮಪ್ಪ ತವಗ, ಹುಸೇನಪ್ಪ ಗುತ್ತಿಗೆದಾರ, ಬಾಳಪ್ಪ, ರಾಜಾ ವಾಸುದೇವ ನಾಯಕ, ಭೀಮಣ್ಣ ನಾಯಕ, ರಾಜಪ್ಪ ಬಾಗೂರು ಉಪಸ್ಥಿತರಿದ್ದರು.

ಕವಿತಾಳ ವರದಿ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 57ನೇ ಮಹಾ ಪರಿನಿರ್ವಾಣ ದಿನಾಚರಣೆ ನಿಮಿತ್ತ ಪಟ್ಟಣದ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಿರಲಿಂಗಪ್ಪ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿ ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳು ಎಲ್ಲ ವರ್ಗದ ಜನರ ಹಿತಕ್ಕಾಗಿ ಬಳಕೆಯಾಗಬೇಕು ಎಂದರು. ಮಹಾನ್ ವ್ಯಕ್ತಿಗಳ ಸ್ಮರಣೆಯೊಂದಿಗೆ ಅವರ ತತ್ವ ಆದರ್ಶಗಳನ್ನು ಗೌರವಿಸಿ ಅಳವಡಿಕೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಾಳಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ದಿಲೀಪ್ ಸಾಬ್, ರಾಮಣ್ಣ ಮ್ಯಾಗಳಮನಿ, ಮರಿಯಪ್ಪ, ಅಲ್ಲಮಪ್ರಭು, ಪ್ರಕಾಶ, ಮಾರ್ಕಂಡೇಯ, ಈರಣ್ಣ ಕೆಳಗೇರಿ, ಲಾಳ್ಳೆಪ್ಪ, ಬಸ್ಸಪ್ಪ ಮ್ಯಾಗಳಮನಿ, ರಫಿ, ಹನುಮಂತ ಬುಳ್ಳಾಪುರ ಇತರರು ಉಪಸ್ಥಿತರಿದ್ದರು.

ಮಸ್ಕಿ ವರದಿ
ಡಾ. ಬಿ. ಆರ್‌. ಅಂಬೇಡ್ಕರ್‌ ಅವರು 57ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಮಸ್ಕಿಯ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧಡೆ ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ ಗೌರವ ಸಲ್ಲಿಸಲಾಯಿತು.

ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪಂಚಾಯಿತಿ ಅಧ್ಯಕ್ಷ ಅಮರೇಶ ಮಸ್ಕಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು. ದಲಿತ ಮುಖಂಡ ಮಲ್ಲಯ್ಯ ಬಳ್ಳಾ, ಹನುಮಂತಪ್ಪ ವೆಂಕಟಾಪುರ, ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಯ್ಯ ಮುರಾರಿ, ನಾಗಪ್ಪ ತತ್ತಿ, ರಾಜಾಸಾಬ, ಮುದಿಯಪ್ಪ ಇತರರು ಇದ್ದರು.

ಹಳೇ ಬಸ್‌ ನಿಲ್ದಾಣದಲ್ಲಿ ಇರುವ ಅಂಬೇಡ್ಕರ್‌ ಅವರ ಪುತ್ಥಳಿಗೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಹೂ ಮಾಲೆ ಅರ್ಪಿಸಿ ಗೌರವ ಸಲ್ಲಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಕೂಡಾ ಗೌರವ ಸಲ್ಲಿಸಿದರು. ಪಟ್ಟಣದ ಶಾಲೆ, ಕಾಲೇಜುಗಳಲ್ಲಿ ಡಾ. ಬಿ. ಆರ್‌.  ಅಂಬೇಡ್ಕರ್‌ ಅವರ 57 ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.