ADVERTISEMENT

`ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆ'

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 8:11 IST
Last Updated 12 ಏಪ್ರಿಲ್ 2013, 8:11 IST

ದೇವದುರ್ಗ: ಇಲ್ಲಿನ ಸಾರ್ವಜನಿಕ ಆಸ್ಪತ್ರೆ ರೋಗಿಗಳ ಪಾಲಿಗೆ ನರಕವಾಗಿದ್ದು, ಬಡ ರೋಗಿಗಳ ಅನುಕೂಲಕ್ಕಾಗಿಯೇ ಇಡಲಾಗಿರುವ  ಅಂಬುಲೆನ್ಸ್ ವರ್ಷ ಪೂರ್ತಿ ದುರಸ್ತಿಯಲ್ಲಿ ಇರುವುದರಿಂದ ಬಡವರ ಪಾಲಿಗೆ ದುಬಾರಿಯಾಗಿರುವುದು ದುರದೃಷ್ಟ ಎನ್ನುವಂತಿದೆ.

ಪಟ್ಟಣದಲ್ಲಿ ಕೋಟಿಗಟ್ಟಲೇ ಹಣ ಖರ್ಚು ಮಾಡಿ 100 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆ ನಿರ್ಮಿಸಲಾಗಿದ್ದರೂ ಅದರ ನಿರ್ವಹಣೆ ಮಾತ್ರ ಯಾರು ಕೇಳದಂತ ಪರಸ್ಥಿತಿ ಒಂದು ಕಡೆ ಇದ್ದರೆ ಆಸ್ಪತ್ರೆ ಈಗ ಗಬ್ಬೆದ್ದು ನಾರುತ್ತಿರುವುದರಿಂದ ಬಂದ ರೋಗಿಗಳು ಮೂಗು ಮುಚ್ಚಿಕೊಂಡು ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಇದೆ.

ಆಸ್ವತ್ರೆಯನ್ನು ಜರ್ಮನ್ ಸಹಯೋಗದೊಂದಿಗೆ ಕೋಟಿಗಟ್ಟಲೆ ಹಣ ಖರ್ಚುಮಾಡಿ ಮೇಲ್ದರ್ಜಿಗೆ ಏರಿಸಲಾಗಿದೆ. ಪ್ರತಿನಿತ್ಯ ಗ್ರಾಮಗಳಿಂದ ಚಿಕಿತ್ಸೆಗಾಗಿ ಪಟ್ಟಣಕ್ಕೆ ಬಂದರೆ ಇಲ್ಲಿನ ಕೆಲವು ವೈದ್ಯಾಧಿಕಾರಿಗಳ ಬೇಜವಾಬ್ದಾರಿ, ಸಿಬ್ಬಂದಿಗಳ ನಿರ್ಲಕ್ಷ್ಯತೆಯ ನರಕಯಾತನೆ ತಾಳದೆ ಬಂದ ದಾರಿಗೆ ವಾಪಸ್ ಹೋಗುವದು, ಇಲ್ಲವೇ ಅನಿವಾರ್ಯ ಎಂಬುವಂತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕ್ಸಿತೆ ಪಡೆಯುವುದು ರೋಗಿಗಳಿಗೆ ಸಾಮಾನ್ಯವಾಗಿದೆ.

ಬಡವರು ಮತ್ತು ಕಡುಬಡವರಿಗೆ ಉಚಿತವಾಗಿ ತುರ್ತು ಸಂದರ್ಭದಲ್ಲಿ ಅನುಕೂಲಕ್ಕಾಗಿ ಅಂಬುಲೆನ್ಸ್ ವ್ಯವಸ್ಥೆ ಮಾಡಬೇಕಾಗಿದೆ. ನೂರು ಹಾಸಿಗೆ ಆಸ್ಪತ್ರೆ ಎನಿಸಿಕೊಂಡರೂ ಅಗತ್ಯಗೆ ತಕ್ಕಂತೆ ಅಂಬುಲೆನ್ಸ್ ವಾಹನದ ಅವ್ಯವಸ್ಥೆ ಇಲ್ಲ. ಇರುವ ಒಂದು ಅಂಬುವೆನ್ಸ್ ವರ್ಷದಲ್ಲಿ ಅರ್ಧ ದಿನ ರಿಪೇರಿಗೆ ಹೋಗಿರುವುದು ಮತ್ತು 108 ವಾಹನ ಇದ್ದರೂ ಬಹಳಕೆಗೆ ಕೆಲವು ನಿಯಮಗಳು ಇರುವುದರಿಂದ ತುರ್ತು ಸಂದರ್ಭದಲ್ಲಿ ದೂರದಂಥ ಜಿಲ್ಲಾ ಆಸ್ಪತ್ರೆಗಳಿಗೆ 108 ವಾಹನ ತೆಗೆದುಕೊಂಡು ಹೋಗಲು ಬರುವುದಿಲ್ಲ. ಈ ಕಾರಣದಿಂದ  ಎಷ್ಟೊ ಜನ ಬಡವರಿಗೆ ತುರ್ತು ಸಂದರ್ಭದಲ್ಲಿ ಇನ್ನಿಲ್ಲದ ತೊಂದರೆ ಎದುರಾಗಿದ್ದು, ಕೆಲವು ಸಂದರ್ಭದಲ್ಲಿ ರೋಗಿಗಳು ಖಾಸಗಿ ವಾಹನ ಬಾಡಿಗೆ ರೂಪದಲ್ಲಿ ತೆಗೆದುಕೊಂಡು ಹೋದರೆ ಇನ್ನೂ ಕೆಲವರು ಆರ್ಥಿಕ ತೊಂದರೆಯಿಂದ ಬಂದ ದಾರಿಗೆ ವಾಪಸ್ ಗ್ರಾಮಕ್ಕೆ ಹೋದ ಘಟನೆಗಳು ನಡೆದಿವೆ. ಉತ್ತಮ ಗುಣಮಟ್ಟದ ಚಿಕಿತ್ಸೆ, ಔಷಧಕ್ಕಾಗಿ ಸರ್ಕಾರ ವರ್ಷಕ್ಕೆ ಲಕ್ಷಗಟ್ಟಲೇ ಹಣ ಖರ್ಚು ಮಾಡಲಾಗುತ್ತದೆ. ಚಿಕ್ಸಿತೆಗೆ ಬರುವ ರೋಗಿಗಳಿಗೆ ಅದರ ಲಾಭ ಸಿಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.