ಲಿಂಗಸುಗೂರ: ಸರ್ಕಾರದ ನಿರ್ದೇಶನದಂತೆ ಪ್ರತಿ ತಿಂಗಳು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗೌರವಧನ ನೀಡದೇ ನಿರ್ಲಕ್ಷ್ಯ ವಹಿಸುತ್ತ ಬಂದಿದ್ದಾರೆ. ಗೌರವಧನ ಕುರಿತು ಮಾಹಿತಿ ಕೇಳುವವರೊಂದಿಗೆ ಅಗೌರವದೊಂದಿಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಸಿಡಿಪಿಒ ವರ್ತನೆ ವಿರೋಧಿಸಿ ಶುಕ್ರವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತರು ಸಾಂಕೇತಿಕ ಧರಣಿ ನಡೆಸಿದರು.
ಕಳೆದ ತಿಂಗಳು ಗಣೇಶ ಮತ್ತು ರಂಜಾನ್ ಹಬ್ಬಗಳ ಪ್ರಯುಕ್ತ ಗೌರವಧನ ನೀಡುವಂತೆ ಕಳಕಳಿಯ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು ನಿವೃತ್ತಿ ಹೊಂದಿದ್ದಾರೆ ಎಂದು ಹೇಳಿದರು.
ಜಿಲ್ಲೆಯ ಬೇರೆ ತಾಲ್ಲೂಕುಗಳಲ್ಲಿ ಹಬ್ಬದ ನಿಮಿತ್ತ ಗೌರವಧನ ನೀಡಿದ್ದಾರೆ. ಸ್ಥಳೀಯ ಅಧಿಕಾರಿ ಮಾತ್ರ ಗೌರವಧನ ನೀಡಿರುವುದಿಲ್ಲ ಎಂದು ಆರೋಪಿಸಿ ಉಪನಿರ್ದೇಶಕರಿಗೆ ಮನವಿ ರವಾನಿಸಿದರು.
ಧರಣಿ ನೇತೃತ್ವವನ್ನು ಶೇಖ್‌ಷಾ ಖಾದ್ರಿ, ಅನುಸೂಯಾ ಪಾಟೀಲ, ಮರಿಯಮ್ಮ, ಪದ್ಮಾವತಿ, ಮಹೇಶ್ವರಿ, ಸೋನಾಬಾಯಿ, ಪುಷ್ಪಾ, ತಿಪ್ಪಮ್ಮ, ಬಾನು, ಯಲ್ಲಮ್ಮ, ಶಾಂತಕುಮಾರಿ, ಸುಮಿತ್ರಾ, ಈರಮ್ಮ, ಮಲ್ಲನಗೌಡ, ಯಂಕೋಬ ಮತ್ತಿತರರು ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.