ADVERTISEMENT

ಸುಳ್ಳು ಸುದ್ದಿ ಹರಡಿದರೆ ಕ್ರಮ

ಪೊಲೀಸರಿಂದ ಜನ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 20 ಮೇ 2018, 13:08 IST
Last Updated 20 ಮೇ 2018, 13:08 IST

ಮುದಗಲ್: ’ತಾಲ್ಲೂಕಿನಲ್ಲಿ ಮಕ್ಕಳ ಅಪಹರಣ ಕುರಿತು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತಗೆದುಕೊಳ್ಳುತ್ತೇವೆ’ ಎಂದು ಮುದಗಲ್ ಪೊಲೀಸರು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಆಟೊ ಮೂಲಕ ಪಟ್ಟಣದ ವಿವಿಧ ಕಾಲೊನಿಗಳಲ್ಲಿ ಜಾಗೃತಿ ಮೂಡಿಸಿದರು. ತಾಲ್ಲೂಕಿನಲ್ಲಿ ಯಾವುದೇ ಅಪಹರಣಕಾರರು ಬಂದಿಲ್ಲ. ಕೆಲವರು ವಾಟ್ಸ್ ಆ್ಯಪ್ ಮೂಲಕ ಹಿಂದೆ ನಡೆದ ಘಟನೆಯ ವಿಡಿಯೋ ತುಣಕುಗಳನ್ನು ಹಾಕಿ ಜನರಿಗೆ ಭೀತಿ ಉಂಟು ಮಾಡುತ್ತಿದ್ದಾರೆ. ಇದು ಸುಳ್ಳಾಗಿದ್ದು, ಆದರ ರಹಿತ ವಿಡಿಯೋ ತುಣಕುಗಳನ್ನು ಕಳುಹಿಸಿದ ವ್ಯಕ್ತಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಇಂತ ಭಯ ಹುಟ್ಟಿಸುವ ವ್ಯಕ್ತಿಗಳು ಕಂಡು ಬಂದಲ್ಲಿ 94808 0833, 94808 03854, 94808 03857 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT