ADVERTISEMENT

ಸ್ಮಾರಕಗಳು ಪೂರ್ವಜರ ಕುರುಹುಗಳು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 13:05 IST
Last Updated 20 ಫೆಬ್ರುವರಿ 2011, 13:05 IST

ರಾಯಚೂರು: ಐತಿಹಾಸಿಕ ಸ್ಮಾರ ಕಗಳು ನಮ್ಮ ಪೂರ್ವಿಕರ ಜೀವನ ಪದ್ಧತಿಯ ಕುರುಹು ಗಳಾಗಿದ್ದು, ಅವುಗಳ ಸಂರಕ್ಷಣೆ ಎಲ್ಲರ ಜವಾ ಬ್ದಾರಿಯಾಗಿದೆ. ಜನಸಾಮಾನ್ಯರು ಒಗ್ಗಟ್ಟಿನಿಂದ ಶ್ರಮಿಸಿದರೆ ಎಂಥ ಸಾಧನೆಯನ್ನಾದರೂ ಮಾಡ ಬಹುದು ಎಂದು ವಿಶೇಷ ಗುರುತಿನ ಚೀಟಿ ರಚನೆ ಪ್ರಾಧಿಕಾರದ ಉಪ ಮಹಾನಿರ್ದೇಶಕ ಅಶೋಕ ದಳವಾಯಿ ಹೇಳಿದರು.
ಇಲ್ಲಿನ ನವರಂಗ ದರವಾಜಾದಲ್ಲಿ ಶನಿವಾರ ಐತಿಹಾಸಿಕ ಕೋಟೆ ಅಧ್ಯ ಯನ ಸಮಿತಿ ಹಾಗೂ ಗ್ರಾಮ ವಿಕಾಸ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ‘ಎಡದೊರೆ ಬೆಡಗು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಶಕದ ಹಿಂದೆ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದ ಈ ನಗರದ ಐತಿಹಾಸಿಕ ಕೋಟೆ ರಕ್ಷಣೆಯಲ್ಲಿ ಇಲ್ಲಿನ ಜನಸಾಮಾನ್ಯರು ವಹಿಸಿದ ಕಾಳಜಿ ಮಹತ್ವದ್ದಾಗಿದೆ. ವಿದೇಶದಲ್ಲಿ ಚಿಕ್ಕ ಐತಿಹಾಸಕ ಸ್ಮಾರಕ ಕಂಡರೂ ಅಲ್ಲಿನ ಜನ ಸಂರಕ್ಷಿಸುತ್ತಾರೆ. ಆ ಕಾಳಜಿ ನಮಗೂ ಬೇಕು. ಪದವಿ ಮತ್ತು ಹೆಸರಿಗಾಗಿ ಕೆಲಸ ಮಾಡದೆ ನಾವು ಮತ್ತೊಬ್ಬರಿಗೆ ಸ್ಪೂರ್ತಿ ಯಾಗು ರೀತಿಯಲ್ಲಿ ಜೀವನ ನಡೆ ಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಶಾಸಕ ಎನ್.ಎಸ್ ಬೋಸರಾಜ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಜವಾ ಬ್ದಾರಿ ಇಲ್ಲದ ವಾತಾವರಣ ಅಭಿವೃ ದ್ಧಿಗೆ ಮಾರಕ ಎಂದು ನುಡಿದರು.ಅಧ್ಯಕ್ಷತೆ ವಹಿಸಿದ್ದ ಕೋಟೆ ಅಧ್ಯ ಯನ ಸಮಿತಿ ಗೌರವ ಅಧ್ಯಕ್ಷ ಜಯಣ್ಣ ಮಾತನಾಡಿ, ದಶಕದ ಹಿಂದೆ ಈ ಜಿಲ್ಲೆಯಲ್ಲಿ ಜಿಲ್ಲಾಧಿ ಕಾರಿಗಳಾಗಿದ್ದ ಅಶೋಕ ದಳವಾಯಿ ಅವರು ಕೋಟೆ ರಕ್ಷಣೆಗೆ ವಹಿಸಿದ ಕಾಳಜಿಯನ್ನು ಈಗಿನ ಜಿಲ್ಲಾಧಿಕಾರಿ ಅನ್ಬುಕುಮಾರ ಮುಂದುವರಿಸಿದ್ದಾರೆ. ಕೋಟೆ ಕೊತ್ತಲ ಸಂರಕ್ಷಣೆ ವಿಷಯದಲ್ಲಿ ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರ ಸಹಭಾಗಿತ್ವವೂ ಬೇಕು ಎಂದು ಹೇಳಿದರು.

ಈ ಪ್ರದೇಶ ಐತಿಹಾಸಿಕವಾಗಿ ಬಹು ಸಂಸ್ಕೃತಿ ಮತ್ತು ಅತ್ಯಂತ ಶ್ರೀಮಂತ ಹಿನ್ನೆಲೆಯನ್ನು ಹೊಂದಿದೆ ಎಂದು ಆಶಯ ಭಾಷಣ ಮಾಡಿದ ಕರ್ನಾಟಕ ಇತಿಹಾಸ ಆಕಡೆಮಿಯ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ ತಿಳಿಸಿದರು.ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಆರ್ ರೆಡ್ಡಿ, ಶಾಸಕ ಸಯ್ಯದ್ ಯಾಸಿನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ ವಸಂತ ಕುಮಾರ, ನಗರಸಭೆ ಅಧ್ಯಕ್ಷೆ ಮಮತಾ ಸುಧಾಕರ, ನಗರಸಭೆ ಹಿರಿಯ ಸದಸ್ಯ ಜೆ ಶಿವಮೂರ್ತಿ ಇದ್ದರು.ಸಮಿತಿಯ ಗೌರವ ಅಧ್ಯಕ್ಷ ಎಂ.ವಿ.ಎನ್ ರಾವ್ ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಅಧ್ಯಕ್ಷ ಕೆ ಸತ್ಯನಾರಾಯಣ ಸ್ವಾಗತಿಸಿದರು. ಎಚ್.ಎಚ್ ಮ್ಯಾದಾರ ನಿರೂಪಿಸಿ ದರು. ಸಯ್ಯದ್ ಹಫಿಜುಲ್ಲಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.