ADVERTISEMENT

ಹಲವು ಬೇಡಿಕೆ ಈಡೇರಿಸಲು ಆಗ್ರಹ.ಪ್ರೌಢ ಶಾಲಾ ಶಿಕ್ಷಕರಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 13:00 IST
Last Updated 20 ಫೆಬ್ರುವರಿ 2011, 13:00 IST

ರಾಯಚೂರು: ಕೇಂದ್ರ ಸರ್ಕಾರದ 6ನೇ ವೇತನ ಆಯೋಗದ ಶಿಫಾ ರಸ್ಸುಗಳನ್ನು ಯಥಾವತ್ತಾಗಿ ಜಾರಿ ಗೊಳಿಸಬೇಕು, ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಆಗಿರುವ ವೇತನ ತಾರತಮ್ಯ ಸರಿಪಡಿಸಿ 11,400 ದಿಂದ 21, 600ರೂವರೆಗೆ ಹೆಚ್ಚಿಸ ಬೇಕು, ವರ್ಗಾವಣೆ ಕೌನ್ಸಲಿಂಗ್ ನೂನ್ಯತೆ ಸರಿಪಡಿ ಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಘಟಕ ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿತು.

ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಂಘಟನೆಯು ಮನವಿ ಸಲ್ಲಿಸಿತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸಂಘಟನೆ ಪದಾ ಧಿಕಾರಿಗಳು, ಸದಸ್ಯರು ಧರಣಿ ನಡೆಸಿದರು.
ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ನೀಡಬೇಕಾಗಿರುವ ಕನ್ನಡ ವಿಶೇಷ ಬಡ್ತಿ, ವೈದ್ಯಕೀಯ ಭತ್ಯೆ, ಸ್ವಯಂ ಚಾಲಿತ ಬಡ್ತಿ ಹಾಗೂ ಇತರೆ ಸವ ಲತ್ತು ಕೊಡಬೇಕು, ಖಾಲಿ ಇರುವ ಎಲ್ಲ ಹುದ್ದೆಗಳಿಗೆ ಮುಂಬಡ್ತಿ ನೀಡ ಬೇಕು. ಶೇ 100ರಷ್ಟು ಮುಂಬಡ್ತಿ ಮೂಲಕವೇ ತುಂಬಬೇಕು, ಪ್ರೌಢ ಶಾಲೆಯಲ್ಲಿ ಕಾರ್ಯ ನಿರ್ವಹಿಸು ತ್ತಿರುವ ಸ್ನಾತಕೋತ್ತರ ಪದವೀಧರ ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿ ಕೂಡಲೇ ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿತು.

ಗುತ್ತಿಗೆ ಶಿಕ್ಷಕರ  ವಾರ್ಷಿಕ ಬಡ್ತಿಯನ್ನು ಹಿಂಪಡೆಯಲು ಸೂಚಿಸಿ ರುವ ಪ್ರಸ್ತಾವನೆಯನ್ನು ರದ್ದುಪಡಿ ಸಬೇಕು. ಶಿಕ್ಷಣ ಸಂಯೋಜಕ ಹುದ್ದೆಗಳನ್ನು ವಿಷಯ ಪರಿವೀಕ್ಷಕರ ಹುದ್ದೆಗಳಾಗಿ ಪರಿವರ್ತಿಸಬೇಕು, ಪ್ರತಿ ತಿಂಗಳು ಒಂದನೇ ತಾರೀಖಿಗೆ ವೇತನ ನೀಡಬೇಕು ಎಂಬುದು ಸೇರಿದಂತೆ 16 ಬೇಡಿಕೆಗಳನ್ನು ಈಡೇರಿಸಲು ಶಿಕ್ಷಕರ ಸಂಘದ ಪ್ರತಿನಿಧಿಗಳು ಒತ್ತಾಯಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಬಾಬು ಭಂಡಾರಿಗಲ್, ಪ್ರಧಾನ ಕಾರ್ಯ ದರ್ಶಿ ಎಂ ರಾಜಶೇಖರ ದಿನ್ನಿ, ಖಜಾಂಚಿ ನಬಿ ಚಾಂದ್, ಸಹ ಕಾರ್ಯದರ್ಶಿ ಮಲ್ಲಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೆ ಬೂಬಸಾಬಪಾಷಾ ಮೂಲಿಮನಿ, ಪ್ರಧಾನ ಕಾರ್ಯದರ್ಶಿ ಎಸ್.ಎಂ ಜಹಗೀರದಾರ್, ಕಾರ್ಯದರ್ಶಿ ಡಿ ವೆಂಕಟೇಶ, ಖಜಾಂಚಿ ನಾಗರೆಡ್ಡಿ ಹಂಚಿನಾಳ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ ತಿಮ್ಮಣ್ಣ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್, ಅಧ್ಯಕ್ಷ ತಿಮ್ಮಪ್ಪ, ಕಾರ್ಯದರ್ಶಿ ಮಲ್ಲಿಕಾ ರ್ಜುನ ತಾಲ್ಲೂಕು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.