ADVERTISEMENT

‘ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ’

ತಾಲ್ಲೂಕು ಪಂಚಾಯಿತಿ ಸಭೆ: ಅಧಿಕಾರಿಗಳಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 5:02 IST
Last Updated 14 ಡಿಸೆಂಬರ್ 2013, 5:02 IST

ಲಿಂಗಸುಗೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಅಕ್ಷರ ದಾಸೋಹ ಸೇರಿ­ದಂತೆ ಪ್ರತಿಯೊಂದು ಇಲಾಖೆ ಅಧಿಕಾರಿ­ಗಳು ಇನ್ನು ಮುಂದೆ ಎಚ್ಚರಿಕೆ­ಯಿಂದ ಕಾರ್ಯನಿರ್ವ­ಹಿಸಬೇಕು. ಅಭಿ­ವೃದ್ಧಿ ಪರ ಕೆಲಸಗಳತ್ತ ಗಮನ ಹರಿಸು­ವಂತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಸಮ್ಮ ಪರಮಾತ್ಮ, ಉಪಾಧ್ಯಕ್ಷ ಮಾನಪ್ಪ ಚವಾಣ್‌ ಹೇಳಿದರು.

ಶುಕ್ರವಾರ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿದ್ದ ಬಸಮ್ಮ ಸಭೆ ಆರಂಭದಲ್ಲಿಯೇ ಅಕ್ಷರದಾಸೋಹದ ಸಹಾಯಕ ನಿರ್ದೇಶಕರ ಕಾರ್ಯವೈಖರಿ, ಕಚೇರಿ­ಯಲ್ಲಿ ನಿರಂತರ ಗೈರು ಹಾಜರಿ, ಅಡುಗೆದಾರರ ಅಲೆದಾಟ, ನಿಗದಿತ ಅವಧಿಯಲ್ಲಿ ವೇತನ ಪಾವತಿಸದಿರುವ ಆರೋಪಗಳ ಬಗ್ಗೆ ಗಮನ ಸೆಳೆದರು. ಅಧಿಕಾರಿ ನೆಪ ಹೇಳಿ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ನೀಡಿದರು.

ಉದ್ಯೋಗ ಖಾತರಿ ಯೋಜನೆ ಅಡಿ ಜಲಾನಯನ, ಅರಣ್ಯ, ತೋಟಗಾರಿಕೆ ಮತ್ತಿತರ ಇಲಾಖೆಗಳಲ್ಲಿ ಕ್ರಿಯಾ­ಯೋಜನೆ ಒಂದು, ಕೆಲಸ ಮತ್ತೊಂದು. ಕೆಲವೆಡೆ ಹಳೆ ಕಾಮಗಾರಿ ತೋರಿಸಿ ನಕಲಿ ಬಿಲ್‌ ಪಾವತಿ ಆಗಿರುವ ಬಗ್ಗೆ ಅಧ್ಯಕ್ಷರು ಸಭೆ ಗಮನ ಸೆಳೆದರು. ಅಂತಹ ಅವಘಡಗಳಿಗೆ ಅವಕಾಶ ನೀಡದಂತೆ  ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆ ಸಂಪರ್ಕಗಳು ಸಂಪೂರ್ಣ ಹಾಳಾ­ಗಿವೆ. ಲೊಕೋಪಯೋಗಿ ಇಲಾಖೆ ಈ ನಿಟ್ಟಿನಲ್ಲಿ ಸರ್ಕಾರದ ಗಮನಕ್ಕೆ ತರ­ಬೇಕು. ತಾಲ್ಲೂಕು ಪಂಚಾಯಿತಿ ಕೂಡ ಗೊತ್ತುವಳಿ ಸ್ವೀಕರಿಸಲು ತಾಪಂ ಅಧಿಕಾ­ರಿಗೆ ಸೂಚಿಸಿದರು. ಒಟ್ಟಾರೆ, ವಿವಿಧ ಇಲಾಖೆಗಳಲ್ಲಿ ಅರ್ಧಕ್ಕೆ ನಿಂತ ಹಾಗೂ ಮಾಡಬಹುದಾದ ಕಾಮಗಾರಿಗಳ ಕ್ರಿಯಾಯೋಜನೆಗೆ ಸೂಚಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯ­ನಿರ್ವಾಹಕ ಅಧಿಕಾರಿ ಶರಣಬಸವ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.