ADVERTISEMENT

‘ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆ’

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 10:33 IST
Last Updated 21 ಮಾರ್ಚ್ 2014, 10:33 IST

ಮುದಗಲ್ಲ: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಗೆಲುವಿಗೆ  ಶ್ರೀ ರಕ್ಷೆ ಆಗಲಿವೆ ಎಂದು ರಾಯಚೂರು ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಹೇಳಿದರು.

ಮುದಗಲ್ಲ ಸಮೀಪದ ಆಶಿಹಾಳ ತಾಂಡಾದಲ್ಲಿ ಗುರುವಾರ ನಡೆದ ಬಿಜೆಪಿ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತ ಗುಜರಾತ ರಾಜ್ಯದಲ್ಲಿ ನರೇಂದ್ರ ಮೋದಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮಾಡಿದ್ದಾರೆ. ಮೋದಿ ಅಲೆ ದೇಶದಲ್ಲಿದೆ. ನಮ್ಮ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ವೇಳೆ ಜಿಲ್ಲೆಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಐ.ಐ.ಟಿ ಸೆಂಟರ್, ಸಿಂಧನೂರು, ಮಾನ್ವಿ ಕಾಲುವೆಗಳ  ಅಭಿವೃದ್ಧಿ, ಜಿಲ್ಲೆಯ ರಸ್ತೆಗಳ ದುರಸ್ತಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಸರ್ಕಾರದಲ್ಲಿ ನಡೆದಿದೆ.

ಕಾಂಗ್ರೆಸ್ ಸರ್ಕಾರ ಈ ದೇಶವನ್ನು ಆಳು ಮಾಡಿದೆ. ಕಾಂಗ್ರೆಸ್ ಪಕ್ಷ ಲಿಂಗಸುಗೂರು ಕ್ಷೇತ್ರದ ಮಾಜಿ ಸಚಿವ ಅಮರೇಗೌಡ ಬಯ್ಯಾಪುರಗೆ ಕೊಪ್ಪಳ ಲೋಕಸಭೆಗೆ ಟಿಕೆಟ್ ನೀಡದೆ ಮೋಸ ಮಾಡಿದೆ ಎಂದರು.

ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಬಸನಗೌಡ ಬ್ಯಾಗವ್ಯಾಟ, ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಲೆಕ್ಕಿಹಾಳ, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಗುರುಬಸಪ್ಪ ಸಜ್ಜನ, ಲಿಂಗಸುಗೂರು ಬ್ಲಾಕ್ ಬಿಜೆಪಿ ಘಟಕದ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮುದಗಲ್ಲ ಬ್ಲಾಕ್ ಬಿಜೆಪಿ ಘಟಕದ ಅಧ್ಯಕ್ಷ ಎಸ್‌.ಎ. ಮುಬಿನ್ ಸಾಬ ಮಾತನಾಡಿದರು. ನಿವೃತ್ತ ಡಿಜಿಪಿ ಟಿ.ಆರ್ ನಾಯಕ,  ಉದ್ಯಮಿ ಸಿದ್ದು ಬಂಡಿ, ತಾಲ್ಲೂಕು  ಬಿಜೆಪಿ ಬ್ಲಾಕ್ ಘಟಕದ ಉಪಾಧ್ಯಕ್ಷ ಮಲ್ಲಪ್ಪ ಹೂಗಾರ, ಜಿ.ಜಿ.ನಾಯಕ ಸೇರಿದಂತೆ ಇತತರು ಇದ್ದರು.

‘ಮಾದರಿ ಜಿಲ್ಲೆಗೆ ಶ್ರಮಿಸುವೆ’

ಮುದಗಲ್ಲ: ಲೋಕಸಭೆ ಚುನಾವ­ಣೆ­ಯಲ್ಲಿ ಗೆದ್ದು ಬಂದರೆ ರಾಯ­ಚೂರು ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಮಾಡುತ್ತೇನೆ ಎಂದು ರಾಯಚೂರು ಲೋಕ ಸಭೆ ಬಿಜೆಪಿ ಅಭ್ಯರ್ಥಿ  ಶಿವನಗೌಡ ನಾಯಕ ಹೇಳಿದರು.

ಸಮೀಪದ ಆಶಿಹಾಳ ತಾಂಡಾ ನಿವೃತ್ತ ಡಿಜಿಪಿ ಟಿ.ಆರ್ ನಾಯಕ ಮನೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ. ಗೆದ್ದು ಬಂದರೆ ಸಮಸ್ಯೆಗಳಿಗೆ ಪರಿಹಾರ ಮಾಡುತ್ತೆನೆ. 8 ತಿಂಗಳಿಂದ ಕ್ಷೇತ್ರದ ಪ್ರತಿ ಹಳ್ಳಿಗೆ ಹೋಗಿ ಅಲ್ಲಿನ ಸಮಸ್ಯೆಗಳನ್ನು ಕಣ್ಣಾರೆ ನೋಡದ್ದೆನೆ.  ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಅಭಿವೃದ್ಧಿ ಕಡೆ ಗಮನ ನೀಡಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.