ADVERTISEMENT

‘ದೇಶಿಯ ಆರೋಗ್ಯ ಪದ್ಧತಿ ಅವಶ್ಯ’

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 8:49 IST
Last Updated 8 ಮಾರ್ಚ್ 2014, 8:49 IST

ರಾಯಚೂರು: ದೇಶಿಯ ಆರೋಗ್ಯ ಪದ್ಧತಿಯು ಪರಂಪರಾಗತವಾದುದು. ಖರ್ಚಿಲ್ಲದ, ಅಡ್ಡ ಪರಿಣಾಮಗಳಿಲ್ಲದ ಚಿಕಿತ್ಸಾ ಪದ್ಧತಿಯಾಗಿದೆ. ಇಂಥ ಚಿಕಿತ್ಸಾ ಪದ್ಧತಿ ಪ್ರಯೋಜನಗಳ ಬಗ್ಗೆ ತಜ್ಞ ವೈದ್ಯರಿಂದ ತಿಳಿದು ಚಿಕಿತ್ಸೆ ಪಡೆಯುವ ಮೂಲಕ ಆಯುಷ್ ಇಲಾಖೆ ಸೇವೆಯ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ಹೇಳಿದರು.

ಶುಕ್ರವಾರ ಇಲ್ಲಿನ ಜಿಲ್ಲಾ ಆಯುಷ್ ಇಲಾಖೆ ಕಚೇರಿ ಆವರಣದಲ್ಲಿ ಆಯುಷ್ ನಿರ್ದೇಶನಾಲಯದ ಆಶ್ರಯದಲ್ಲಿ ಏರ್ಪಡಿಸಿದ್ದ ಆಯುಷ್ ಆರೋಗ್ಯ ಮೇಳ ಉದ್ಘಾಟನೆ ಮಾಡಿ ಮಾತನಾಡಿದರು.

ಆಯುರ್ವೇದ ಚಿಕಿತ್ಸಾ ಪದ್ಧತಿ, ಗಿಡ ಮೂಲಿಕೆ, ವನಸ್ಪತಿಗಳಿಂದ ಮನೆಯಲ್ಲಿಯೇ ಔಷಧ ತಯಾರಿಸಿ ರೋಗ ರುಜಿನಗಳಿಂದ ಗುಣಮುಖವಾಗುವ ಪದ್ಧತಿ ದೇಶದಲ್ಲಿ ಶತಮಾನಗಳಿಂದ ಬಳಕೆಯಲ್ಲಿದೆ. ಆದರೆ, ಪ್ರಸ್ತುತ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣ­ದಲ್ಲಿ ಈ ಚಿಕಿತ್ಸಾ ಪದ್ಧತಿ ಬಗ್ಗೆ ತಿಳಿಸಿಕೊಡಬೇಕಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯಾ ಜ್ಯೋತ್ಸ್ನಾ ಅಯುರ್ವೇದ ಮಳಿಗೆ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಡಾ. ಮುನಿ­ವಾಸುದೇವರೆಡ್ಡಿ, ರಾಜ್ಯ ಆಯುಷ್ ವೈದ್ಯರ ಸಂಘದ ಉಪಾಧ್ಯಕ್ಷ ಡಾ. ಶಂಕರಗೌಡ, ಜಿಲ್ಲಾಆಯುಷ್ ಅಧಿಕಾರಿ ಡಾ.ಅಮರಗುಂಡಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.